ಮನೆ ಮನೆ ತೆರಳಿ ಆರೋಗ್ಯ ತಪಾಸಣೆ

ನಗರ ಸಭಾ ಸದಸ್ಯ ವಿಜಯ ಕೊಡವೂರು ಇವರು ಸಮಾಜ ಸೇವೆಯಲ್ಲಿ ನೂತನ ಪರಿಕಲ್ಪನೆಯನ್ನು ತಮ್ಮ ವಾರ್ಡಿನಲ್ಲಿ ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರುತ್ತಿದ್ದಾರೆ.

ಈಗ ಹೊಸ ಚಿಂತನೆಯೊಂದಿಗೆ ಕೊಡವೂರು ಸಂಚಾರಿ ಆಸ್ಪತ್ರೆ ಎನ್ನುವ ಕಲ್ಪನೆಯೊಂದಿಗೆ ಕಾರ್ಯಕ್ರಮವನ್ನು ಕೈಗೆತ್ತಿ ಕೊಂಡಿದ್ದಾರೆ.

ಮಲ್ಪೆ ಸರ್ಕಾರಿ ಆಸ್ಪತ್ರೆಯ ಉಪಕೇಂದ್ರವು ಕೊಡವೂರಿನಲ್ಲಿದೆ.

ಮನೆಯಿಂದ ಹೊರ ಬಾರಲಾರದಂತಹ ರೋಗಿಗಳು, ಅಂಗವಿಕಲರು, ಹಾಗೂ ವೃದ್ಧರು ಇಂತಹವರ ಮನೆಗಳನ್ನು ಗುರುತಿಸಿ ಮಹಿಳಾ ಸಮಿತಿಯ ಸಹಕಾರ ಹಾಗೂ ದಾನಿಗಳ ನೆರವಿನಿಂದ ಅವರ ಮನೆಗೆ ಭೇಟಿನೀಡಿ ಆರೋಗ್ಯತಪಾಸಣೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.

ಪ್ರತೀ ತಿಂಗಳು ಆಯ್ದ 13 ಮನೆಗಳಿಗೆ ಹೋಗಿ ಈ ರೀತಿಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ವಾಗಿದೆ.

ಈ ಮನೆ ಮನೆ ಆರೋಗ್ಯ ತಪಾಸಣಾ ಕಾರ್ಯ ಕ್ರಮಕ್ಕೆ ವಾಹನದ ವ್ಯವಸ್ಥೆಯನ್ನು ರವಿರಾಜ ಕೊಡವೂರು ಮಾಡಿದ್ದಾರೆ.

ಸಮಾಜದ ಸಜ್ಜನರೂ ಇಂತಹ ಸೇವಾ ಕಾರ್ಯ ಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ಪ್ರೇರಣೆಯಾಗಲಿ ಎಂಬುದು ಸಂಘಟಕರ ಆಶಯವಾಗಿದೆ.

ಈ ಸಂದರ್ಬದಲ್ಲಿ ಮೈತ್ರಿ, ಸಮುದಾಯ ಆರೋಗ್ಯ ಅಧಿಕಾರಿ. ಮಹಿಳಾ ಸಮಿತಿ ಪ್ರಮುಖರಾದ ಪ್ರೀತಿ, ಗುಣವತಿ, ಆಶಾ ಕಾರ್ಯಕರ್ತೆ ಮಾಲತಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply