ಪುತ್ತಿಗೆ ಪರ್ಯಾಯದ ಬಾಳೆ ಮುಹೂರ್ತ

: ಭಾವೀ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಡಿ. 2ರಂದು ನಡೆಯಲಿದೆ.

ಅಂದು ಬೆಳಿಗ್ಗೆ 8.20ರ ಧನುರ್ಲಗ್ನ ಸುಮುಹೂರ್ತ ದಲ್ಲಿ ಪುತ್ತಿಗೆ ಶ್ರೀಮಠದ ಆವರಣದಲ್ಲಿ ಕಾರ್ಯ ಕ್ರಮ ನಡೆಯಲಿದೆ

ಬೆಳಿಗ್ಗೆ 7ರಿಂದ ದೇವತಾ ಪ್ರಾರ್ಥನೆ, ಮೆರವಣಿಗೆ, ಚಂದ್ರೇಶ್ವರ, ಅನಂತೇಶ್ವರ ಕೃಷ್ಣದರ್ಶನ ಇತ್ಯಾದಿ ನಡೆಯಲಿದೆ.

9ರಿಂದ ಶ್ರೀಗಳವರ ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

2024ರ ಜ. 18ರಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕರಕಮಲ ಸಂಜಾತರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದ ರೊಡಗೂಡಿ ಸರ್ವಜ್ಞ ಪೀಠಾರೋಹಣಗೈದು ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸುವರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply