ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ. ಇದರ ನೇಕಾರ ಸದಸ್ಯರಿಗೆ ಮಿತವ್ಯಯ ನಿಧಿ

ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ. ಇದರ ನೇಕಾರ ಸದಸ್ಯರಿಗೆ ಮಿತವ್ಯಯ ನಿಧಿ ಹಸ್ತಾಂತರ ವನ್ನು ದಿನಾಂಕ 12-12-2022 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ನೆರವೇರಿಸಿದರು.

19 ಫಲಾನುಭವಿಗಳಿಗೆ ಅವರ ದುಡಿಮೆಯ ನಿಧಿಗೆ, ಸರಕಾರದ ಪಾಲು ಮತ್ತು ಬಡ್ಡಿ ಸೇರಿಸಿ ರಾಜ್ಯ ಸರಕಾರ ಬಿಡುಗಡೆ ಮಾಡಿದ ಒಟ್ಟು 44 ಲಕ್ಷ ರೂಪಾಯಿ ಮಿತವ್ಯಯ ನಿಧಿಯನ್ನು ವಿತರಿಸಲಾಯಿತು.

ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳನ್ನು ಅಭಿನಂದಿಸಿದ ನೇಕಾರರ ಹಿತಚಿಂತಕ ಶಾಸಕ ರಘುಪತಿ ಅವರನ್ನು ಅಧ್ಯಕ್ಷರು ಕೈಮಗ್ಗದ ಶಾಲು ಹೊದೆಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷರಾದ ಗೀತಾ ಕೇಶವ ಶೆಟ್ಟಿಗಾರ್, ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ನಗರ ಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಮಂಜುನಾಥ್ ಮಣಿಪಾಲ್, ಶಿವಳ್ಳಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕಾಂತ್ ಕೋಟ್ಯಾನ್, ಉಡುಪಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಕುಮಾರ್, ನೇಕಾರ ಪ್ರತಿಷ್ಠಾನದ ಪದಾಧಿಕಾರಿಗಳಾದ ನ್ಯಾಯವಾದಿ ನಾಗರಾಜ್ ಕಿನಿಮೂಲ್ಕಿ, ಪ್ರೇಮಾನಂದ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply