ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಗಮಕ ವ್ಯಾಖ್ಯಾನ ಕಾರ್ಯಕ್ರಮ

ಕರ್ನಾಟಕ ಗಮಕ ಕಲಾ ಪರಿಷತ್ತು ಸ್ಥಾಪನೆಯಾಗಿ ಮೂವತ್ತೆಂಟು ವರ್ಷಗಳು ಕಳೆದರೂ ಕರ್ನಾಟಕ ಸರಕಾರದಿಂದ ಈವರೆಗೂ ಅದಕ್ಕೆ ಯಾವುದೇ ಅನುದಾನ,ದೇಣಿಗೆ ಒದಗಿಬಂದಿಲ್ಲ.ಕಾವ್ಯಾರ್ಥವನ್ನು ಗ್ರಹಿಸಲು ಸಹಕಾರಿಯಾದ ಪ್ರಾಚೀನ ಕಲೆಗಳಲ್ಲಿಒಂದಾದ ಗಮಕದ ಬಗೆಗಿನ ಸರಕಾರದ ಅನಾದರ ನಿಜಕ್ಕೂ ಬೇಸರ ಉಂಟುಮಾಡುತ್ತದೆ. ಕನ್ನಡ ಕಾವ್ಯಪ್ರಭೇದಗಳನ್ನು ಜನಮನಕ್ಕೆ ಮುಟ್ಟಿಸುವ, ಕಾವ್ಯದ ಭಾವವನ್ನು ಸ್ಫುಟಗೊಳಿಸುವ ಈ ಕಲೆಯ ಮಹತ್ವವನ್ನು ಯುವಜನತೆ ಅರಿಯಬೇಕಾಗಿದೆ” ಎಂದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಈಚೆಗೆ ನುಡಿದರು. ಅವರು ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮೆಸ್ಟರ್ ನ ವಿದ್ಯಾರ್ಥಿ- ಶಿಕ್ಷಕರಿಗಾಗಿ ಏರ್ಪಡಿಸಲಾದ ಗಮಕ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉಡುಪಿ ತಾಲ್ಲೂಕು ಗಮಕ ಪರಿಷತ್ತಿನ ಅಧ್ಯಕ್ಷರಾದ ಪ್ರೊ ಎಂ.ಎಲ್. ಸಾಮಗರು ಸಾಹಿತ್ಯ, ಸಂಗೀತ ಸರಸ್ವತಿಯ ಸ್ಥನದ್ವಯಗಳು. ಗಮಕ ಕಲೆ ಸಾಹಿತ್ಯ, ಸಂಗೀತ,ಭಾಷಾಜ್ಞಾನ ಹಾಗೂ ಪುರಾಣಜ್ಞಾನವನ್ನು ಒದಗಿಸುವ ಕಲೆ. ಶಿಕ್ಷಕರು ಇಂಥ ಕಲೆಯ ಆರಾಧಕರಾಗಬೇಕು ಎಂದು ನುಡಿದರು. ಕಾಲೇಜಿನ ಸಮನ್ವಯಾಧಿಕಾರಿ ಸ್ವಾಗತ ಕೋರಿದರೆ ಕಿರಣ್ ಧನ್ಯವಾದ ಸಲ್ಲಿಸಿದರು. ಬಳಿಕ ರಣಾಂಗಣದಲ್ಲಿ ಕಲಿ ಕರ್ಣ’ ಎಂಬ ಕುಮಾರವ್ಯಾಸ ಭಾರತದಿಂದ ಆಯ್ದ ಭಾಗದ ಗಮಕ -ವ್ಯಾಖ್ಯಾನವನ್ನು ಶ್ರೀ ಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮತ್ತು ಡಾ ರಾಘವೇಂದ್ರ ರಾವ್ ನಡೆಸಿಕೊಟ್ಟರು.

 
 
 
 
 
 
 
 
 
 
 

Leave a Reply