ಯುವತಿಗೆ ಆಸಿಡ್‌ ಎರಚಿದ್ದ ನಾಗನಿಗೆ ವಿಧಿಯ ತಕ್ಕ ಪಾಠ!

ತನ್ನ ಪ್ರೀತಿಯನ್ನು ಸ್ವೀಕರಿಸದ ಕಾರಣ ಯುವತಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ ನಾಗೇಶ್, ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವುದರ ಜೊತೆಗೆ ಗಂಭೀರ ಖಾಯಿಲೆಯಿಂದಲೂ ಬಳಲುತ್ತಿದ್ದಾನೆ ಎಂದು ಹೇಳಲಾಗಿದೆ. ಈತ ಇದೀಗ ಗ್ಯಾಂಗ್ರಿನ್‌ ರೋಗದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿದೆ.

ತಾನು ಪ್ರೀತಿಸಿದ ಯುವತಿ ಬೇರೆ ಯಾರಿಗೂ ಸಿಗಬಾರದು ಅಂತಾ ಈತ ಯುವತಿಯ ಮುಖಕ್ಕೆ ಆ್ಯಸಿಡ್ ಎರಚಿ ಕಡೆಗೆ ತಮಿಳುನಾಡಿನ ದೇವಸ್ಥಾನದಲ್ಲಿ ಸನ್ಯಾಸಿ ವೇಷ ತೊಟ್ಟು ತಲೆಮರೆಸಿಕೊಂಡಿದ್ದ. ನಂತರ ಕಾಮಾಕ್ಷಿ ಪಾಳ್ಯ ಪೊಲೀಸರು ಆತನನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದರು. ಇದೀಗ ಜೈಲಿನಲ್ಲಿರುವ ನಾಗ ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗ್ತಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply