ಎಸ್. ವಿ.ಟಿ ಯ ‌ಶ್ರುತಿ ರಾಜ್ಯದಲ್ಲಿ ತೃತೀಯ

ಎಸ್. ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿನ ಎಂಟನೇ ತರಗತಿಯ ಶ್ರುತಿ ಎಂ ಅಮಿನ್ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಣದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ 14 ವರ್ಷ ವಯೋಮಾನದ 30 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು ಹಾಗೂ ಪ್ರಭಾವತಿಯರ ಮಾರ್ಗದರ್ಶನದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ಪತ್ತೊಂಜಿಕಟ್ಟೆಯ ಸವಿತಾ ಮತ್ತು ಮಹೇಶ್ ಅಮಿನ್ ಅವರ ಸುಪುತ್ರಿಯಾಗಿರುತ್ತಾರೆ.
ಇವರನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರಾದ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿರುತ್ತಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply