Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

 ಗೋವಿನ ಪೋಷಣೆ ರಾಷ್ಟ್ರೀಯ ಆದ್ಯತೆಯಾಗಲಿ -ಶ್ರೀ ವಿಶ್ವಪ್ರಸನ್ನ ತೀರ್ಥರು

ನೀಲಾವರ ಗೋಶಾಲೆಯಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ 

ಪ್ರತಿಯೊಂದು ಗೋವೂ ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಲೋಕದ ಒಳಿತಿಗಾಗಿಯೇ ಜೀವಿಸುತ್ತವೆ .ಆದ್ದರಿಂದ ರಾಷ್ಟ್ಟದ ಸುಭಿಕ್ಷೆ ಸಮೃದ್ಧಿಯನ್ನು ಬಯಸುವ ಸರಕಾರ ಹಾಗೂ ಪ್ರತಿಯೊಬ್ಬರೂ ಗೋವಿನ ಪೋಷಣೆಯನ್ನು ರಾಷ್ಟ್ರೀಯ ಕರ್ತವ್ಯ ಎಂದೇ ಪರಿಗಣಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ .

ನೀಲಾವರ ಗೋಶಾಲೆಯಲ್ಲಿರುವ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಇದೇ ಮೊದಲ ಬಾರಿಗೆ ಗೋಶಾಲೆ ಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶನಿವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು .‌ಎಷ್ಟೇ ಕಷ್ಟ ಸವಾಲುಗಳು ಎದುರಾದರೂ ದೇಶದಲ್ಲಿ ಗೋವಿನ ರಕ್ಷಣೆಯ ಕಾರ್ಯದಿಂದ ಯಾರೊಬ್ಬರೂ ಹಿಂದೆ ಸರಿಯಲೇ ಬಾರದು . ಒಂದೊಮ್ಮೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ  ದೇಶಕ್ಕೇ ವಿಪತ್ತು ನಿಶ್ಚಿತ ಎಂದು ತಿಳಿಸಿದರು .

ಗೋಶಾಲೆಯ ವ್ಯವಸ್ಥಾಪಕ‌ ನರಸಿಂಹ ಭಟ್ ,  ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣ ಭಟ್ , ವಿಷ್ಣುಮೂರ್ತಿ ಆಚಾರ್ಯ , ಸಿಬಂದಿ ವರ್ಗ  ಮತ್ತು  ಶಾಸ್ತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!