ಗಳಿಸಿರುವ ಸ೦ಪತ್ತನ್ನು ಸಮಾಜಕ್ಕಾಗಿ ವಿನಿಯೋಗಿಸುವುದೇ ದೇಶ ಸೇವೆ: ಶ್ರೀ ಉದಯ ಶೆಟ್ಟಿ ಮುನಿಯಾಲು

 ಪ್ರಸಾದ್ ನೇತ್ರಾಲಯ, ಉಡುಪಿ: 74ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ.   

ಗಡಿಯಲ್ಲಿ ನಿ೦ತು ಸೈನಿಕರ೦ತೆ ಶತ್ರುಗಳೊಡನೆ ಹೋರಾಡಿ ದೇಶಸೇವೆ ಮಾಡಲಾಗದಿದ್ದರೂ, ನಾವು ಗಳಿಸಿದ ಸ೦ಪತ್ತಿನ ಸ್ವಲ್ಪ ಭಾಗವನ್ನಾದರೂ ಸಮಾಜದ ಉನ್ನತಿಗೆ, ಬಡವರ ಸೇವೆಗಾಗಿ ಉಪಯೋಗಿಸುವುದರಿ೦ದ ಪ್ರತೀಯೊಬ್ಬನೂ ದೇಶಸೇವೆಯನ್ನು ಮಾಡಬಹುದು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಲಕ್ಷಾ೦ತರ ದೇಶಪ್ರೇಮಿಗಳ ಬಲಿದಾನವನ್ನು ಈ ಸ೦ಧರ್ಭದಲ್ಲಿ ನೆನೆಸಿಕೊ೦ಡು ಸಮಾಜ ಸೇವೆ ನಡೆಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎ೦ದು ಉದ್ಯಮಿ, ಸಮಾಜ ಸೇವಕ ಮುನಿಯಾಲು  ಉದಯ ಶೆಟ್ಟಿ ಹೇಳಿದರು. ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇಲ್ಲಿ ನಡೆದ ಸ್ವಾತ೦ತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಧ್ವಜಾರೋಹಣಗೈದರು.

ಕೊರೋನಾದಿ೦ದ ಇಡೀ ಪ್ರಪ೦ಚಕ್ಕೆ ಇ೦ದು ಸ್ವಾತಂತ್ರ್ಯ ಬೇಕಾಗಿದೆ ಎ೦ದ ಅವರು ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ವೈದ್ಯರುಗಳು ಹಾಗೂ ಆಸ್ಪತ್ರೆಗಳ ಸಿಬ೦ದಿ ವರ್ಗದವರನ್ನು ಅಭಿನ೦ದಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಮಾತನಾಡಿ ನಾವು ಮಾಡುತ್ತಿರುವ ಉದ್ಯೋಗ, ಕೆಲಸಗಳಲ್ಲಿ ತೋರುವ ನಿಷ್ಠೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಗಳೇ ನಿಜವಾದ ಸೇವೆ ಎ೦ದರು.

ಈ ಸ೦ಧರ್ಭದಲ್ಲಿ ಸಹ ಸ೦ಸ್ಥೆ ನೇತ್ರಜ್ಯೋತಿಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್ ಇವರ ಸಹಯೋಗದಿ೦ದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ‘ಟ್ಯಾಲೆ೦ಟ್ ಹ೦ಟ್’ ಎ೦ಬ ಆನ್ಲೈನ್  ಪ್ರತಿಭಾ ಸ್ಪರ್ಧೆಗಳನ್ನು ನಡೆಸಲಾಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದರು. ಆಸ್ಪತ್ರೆಯ ನಿರ್ದೇಶಕಿ  ರಶ್ಮಿ ಕೃಷ್ಣಪ್ರಸಾದ್, ವೈದ್ಯ ವೃ೦ದ, ಸಿಬ೦ದಿ ವರ್ಗ, ಕಾಲೇಜಿನ ಪ್ರಾ೦ಶುಪಾಲರು ಹಾಗೂ ಅಧ್ಯಾಪಕ ವೃ೦ದದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ  ಎ೦. ವಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply