ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ನಿರಂತರವಾಗಿ ಮಾಡುತ್ತಿದೆ.~ ಸುರೇಶ್ ಶೆಟ್ಟಿ ಗುರ್ಮೆ ,

ಕಾಪು ಕ್ಷೇತ್ರದ ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರಿಗೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಅಭಿನಂದನೆ

ಮುಂಬಯಿ : ಕಾಪು ಕ್ಷೇತ್ರದ ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮೆ  ಅವರು ಮಾತನಾಡುತ್ತಾ ನಮ್ಮ ಅಲ್ಪಕಾಲದ ಬದುಕಲ್ಲಿ ಸಾರ್ಥಕ ಸೇವೆ ಮಾಡಿದಾಗ ಜೀವನದ ಮೌಲ್ಯಗಳು ಅರ್ಥವಾಗುತ್ತದೆ. ನಾನು ಶಾಸಕನಾಗುವ ಮೊದಲು ಜಗತ್ತಿನ ಬಹುತೇಕ ದೇಶಗಳನ್ನು ಸುತ್ತಿ ಬಂದಿದ್ದೇನೆ.

ಅಲ್ಲಿನ ಅಭಿವೃದ್ದಿಯ ಬೆಳವಣಿಗೆಯನ್ನು ಕಂಡಿದ್ದೇನೆ.  ಅದನ್ನು ನನ್ನ ಕ್ಷೇತ್ರದಲ್ಲಿ ಕೂಡಾ ಮಾಡುವಂತಾಗಲು ಪ್ರಯತ್ನಿಸುತ್ತೇನೆ. ಈ ಹಿಂದಿನ್ನ ಮುಖ್ಯ ಮಂತ್ರಿಗೆ ಕರಾವಳಿಯ ಹೆಜಮಾಡಿಯಲ್ಲಿ ಬಂದರು ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ನೀಡಿದ್ದೆ. ಅದರಿಂದ ಕೇವಲ ಮೊಗವೀರ ಬಂಧುಗಳಿಗೆ ಮಾತ್ರವಲ್ಲ ಜಿಲ್ಲೆಯ ಜನತೆ ಉದ್ಯೋಗ ಶೃಷ್ಟಿಯಾಗುತ್ತದೆ.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಹೊರಗಿನವರು ಸುತ್ತಿಕೊಂಡಾಗ ಹೋಗುತ್ತಾರೆ ಅದಕ್ಕೆ ಪೂರಕವಾಗಿ ಪ್ರವಾಸ ಕೇಂದ್ರಗಳು ನಿರ್ಮಾಣಗೊಂಡಾಗ ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು ಕೇವಲ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕೇಂದ್ರ ವಾಗಿರಿಸಿದ್ದೇವೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.
ಅದರಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರಕಿದೆ. ನಾನೊಬ್ಬ ಶಾಸಕನಾಗಿ ನನ್ನಿಂದಾಗುವ ಕಾರ್ಯವನ್ನು ನನಗೆ ತಿಳಿಸಿದಲ್ಲಿ ನಾನು ಅದನ್ನು ಮಾಡುತ್ತೇನೆ. ಉದ್ಯಮಿಗಳಾಗಿ ಸಮಾಜ ಸೇವಕರಾಗಿ ನೀವು ಕೂಡಾ ಜಿಲ್ಲೆಗಳ ಅಭಿವೃದ್ದಿಗೆ ಚಿಂತಿಸಬೇಕು. ನಮಗೆಲ್ಲರಿಗೂ ಒಂದು ಋಣ ಇದೆ ಎಂದರು.
ವೇದಿಕೆಯ ಗಣ್ಯರಿಗೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ತೋನ್ಸೆ ಜಯಕೃಷ್ಣ ಶೆಟ್ಟಿ , ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ ಐ ಆರ್ ಶೆಟ್ಟಿ, , ಹಿರಿಯಡ್ಕ ಮೋಹನ್ ದಾಸ್, ನ್ಯಾ ಆರ್‌.ಎಂ. ಭಂಡಾರಿ, ಗಿರೀಶ್ ಬಿ ಸಾಲ್ಯಾನ್, ಜಿತೇಂದ್ರ ಗೌಡ, ಗೌರವ ಪ್ರಧಾನ ಕಾರ್ಯದರ್ಶಿಯಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್, ಸಮಿತಿಯ ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್‌ ಎಲ್. ಶೆಟ್ಟಿ, ವಿಶ್ವನಾಥ್ ಮಾಡ ,ಹರೀಶ್‌ ಕುಮಾರ್ ಶೆಟ್ಟಿ ಮತ್ತು ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಗೌರವಿಸಿದರು.
 
 
 
 
 
 
 
 
 
 
 

Leave a Reply