ರಾಮಲಲ್ಲಾಗೆ ಸಜ್ಜಾಗಿವೆ ವಿಶೇಷ ಉಡುಪುಗಳು

ಅಯೋಧ್ಯಾ: ಶ್ರೀರಾಮ ಮಂದಿರದ ಭೂಮಿ ಪೂಜೆ ಬುಧವಾರ ರಾಮಲಲ್ಲಾ ವಿಗ್ರಹಕ್ಕೆ ತೊಡಿಸಲು  ಹಸಿರು ಮತ್ತು ಕಿತ್ತಳೆ ಬಣ್ಣದ ಎರಡು ಜೊತೆ ಬಟ್ಟೆಯ ವಿಶೇಷ ಉಡುಪು ಹೊಲಿಯಲಾಗಿದೆ. ಶಿಲಾನ್ಯಾಸ ಸಮಾರಂಭ ನಡೆಯುವ ವೇಳೆ ರಾಮಲಲ್ಲಾ ಹಸಿರು ಉಡುಪಿನಲ್ಲಿ ಕಂಗೊಳಿಸಲಿದ್ದಾನೆ. ಆನಂತರ ಕಿತ್ತಳೆ ಉಡುಪನ್ನು ತೊಡಿಸಲಾಗುತ್ತದೆ. ಕಳೆದ ಮೂರುವರೆ ದಶಕಗಳಿಂದ ರಾಮಲಲ್ಲಾಗೆ ಅಪೂರ್ವವಾದ ಬಟ್ಟೆಗಳನ್ನು ಹೊಲಿಯುತ್ತಿದ್ದ ಶಂಕರ್​ಲಾಲ್ ಮತ್ತು ಭಗತ್​ಲಾಲ್ ‘ಪಹಾಡಿ’ ಸಹೋದರರು ಈ ವಿಶಿಷ್ಟ ಉಡುಪನ್ನು ತಯಾರಿಸಿದ್ದಾರೆ. ದರ್ಜಿಗಳು ವಸ್ತ್ರವನ್ನು ಭಾನುವಾರವೇ ಹಸ್ತಾಂತರಿಸಿದ್ದಾರೆ ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಚಿನ್ನದ ದಾರದಿಂದ ಒಂಬತ್ತು ರತ್ನಗಳನ್ನು ಪೋಣಿಸಿ ಮೃದುವಾದ ಮಖ್ಮಲ್ (ವೆಲ್ವೆಟ್) ಬಟ್ಟೆಯಲ್ಲಿ ಈ ಉಡುಪುಗಳನ್ನು ಹೊಲಿಯಲಾಗಿದೆ. ರಾಮನ ಉಡುಪಿಗೆ ಬಳಸುವಂಥ ಬಟ್ಟೆಯನ್ನೇ ಲಕ್ಷ್ಮಣ, ಭರತ, ಶತ್ರುಘ್ನ, ಹನುಮಾನ್ ಗು  ಬಳಸಲಾಗುತ್ತದೆ. ಅಯೋಧ್ಯೆಯ ಬಡೀ ಕುಟಿಯಾ ಪ್ರದೇಶದಲ್ಲಿ ತಂದೆ ದಿವಂಗತ ಬಾಬುಲಾಲ್ ಹೆಸರಿನಲ್ಲಿರುವ ‘ಬಾಬುಲಾಲ್ ಟೈಲರ್ಸ್’ ಅಂಗಡಿಯಲ್ಲಿ ಉಡುಪು ಹೊಲಿಯ ಲಾಗಿದೆ. ಇವರು ದೇವತಾ ಉಡುಪನ್ನು ಮಾತ್ರ  ಹೊಲಿಯುವುದು.

ಅಯೋಧ್ಯೆಯ ರೈಲು ನಿಲ್ದಾಣವನ್ನು ರಾಮಮಂದಿರ ಮಾದರಿಯಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ ಕೆಲಸ 2021 ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. 104 ಕೋಟಿ ವೆಚ್ಚದ  ಕಾಮಗಾರಿ 2019ರಲ್ಲಿ  ಆರಂಭವಾಗಿದೆ. ಅಯೋಧ್ಯೆಯ. ಇಂದು ಹನುಮ ಗಿರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ನಿಶಾನ್ ಪೂಜೆ ಆರಂಭ ವಾಗಲಿದೆ ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.

ಕರೋನಾ ವೈರಸ್ ಕಾರಣದಿಂದಾಗಿ ತಾವು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ. ಮಂದಿರ ನಿರ್ಮಾಣಕ್ಕೆ ಶಿವಸೇನೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ. ಶಿವಸೇನೆ ಸಂಸ್ಥಾಪಕ ಹಾಗೂ ತಮ್ಮ ತಂದೆ ಬಾಳಾ ಠಾಕ್ರೆ ಈ ಭರವಸೆ ನೀಡಿದ್ದರು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.  ಶಿಲಾನ್ಯಾಸಕ್ಕಾಗಿ ದೇಶದಾ ದ್ಯಂತದ 151 ನದಿಗಳು ಹಾಗೂ ಮೂರು ಸಮುದ್ರಗಳಿಂದ ಸಂಗ್ರಹಿಸಿದ ಜಲವನ್ನು ಅಯೋಧ್ಯೆಗೆ ತರಲಾಗಿದೆ. ಜವುನ್​ಪುರ ಜಿಲ್ಲೆಯ 70ರ ಹರೆಯದ ರಾಧೇ ಶ್ಯಾಮ್ ಪಾಂಡೆ ಮತ್ತು ಪಂಡಿತ್ ತ್ರಿಫಲ ಈ ಕಾರ್ಯ ಮಾಡಿದ್ದಾರೆ. 1968ರಿಂದಲೂ ಅವರು ಈ ಕಾರ್ಯದಲ್ಲಿ ನಿರತರಾಗಿದ್ದು, ಶ್ರೀಲಂಕಾದ 16 ಸ್ಥಳಗಳಿಂದ ಮಣ್ಣನ್ನು ಕೂಡ ಸಂಗ್ರಹಿಸಿದ್ದಾರೆ.

ಹೊಸ ಮಸೀದಿಯೊಂದನ್ನು ಕಟ್ಟಿಕೊಳ್ಳಲು ಅಯೋಧ್ಯೆಯ ಬಳಿಯ ಧನ್ನಿಪುರದಲ್ಲಿ ಮಂಜೂರಾಗಿರುವ 5 ಎಕರೆ ಭೂಮಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಸುನ್ನಿ ವಕ್ಪ್ ಮಂಡಳಿಗೆ ಶನಿವಾರ ಹಸ್ತಾಂತರಿಸಿದರು. ಕಳೆದ ನವೆಂಬರ್ 9ರಂದು ಅಯೋಧ್ಯೆ ವಿವಾದದ ಕುರಿತು ಅಂತಿಮ ತೀರ್ಪು ನೀಡಿದ್ದ್ದ ಸುಪ್ರೀಂಕೋರ್ಟ್ ಜಮೀನು ಒದಗಿಸಲು ನಿರ್ದೇಶಿಸಿತ್ತು
 
 
 
 
 
 
 
 
 

Leave a Reply