ಏಕರೂಪ ಸಂಹಿತೆ ಜಾರಿ: ಮೋದಿ ಬಯಕೆ

ಭೋ‍ಪಾಲ್‌: ‘ಮನೆಯಲ್ಲಿ ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದ್ದರೆ ಕುಟುಂಬವನ್ನು ನಿಭಾಯಿಸುವುದು ಕಷ್ಟ. ಅಂತೆಯೇ ಎರಡು ಕಾನೂನುಗಳಿದ್ದರೆ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವೇ’ ಎಂಬ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ.

ಈ ಮೂಲಕ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳ ವಾರ ಮಾತನಾಡಿದ ಅವರು, ‘ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಬೇಕು’ ಎಂಬ ಸಾಂವಿಧಾನಿಕ ಆದರ್ಶವನ್ನು ಉಲ್ಲೇಖಿಸಿ ದರು.

ಮಧ್ಯಪ್ರದೇಶ ವಿಧಾನಸಭೆಗೆ ಈ ವರ್ಷಾಂತ್ಯ ದಲ್ಲಿ ನಡೆಯಲಿರುವ ಚುನಾವಣೆಯನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಭಾಷಣ ದುದ್ದಕ್ಕೂ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್‌ ಕೂಡ ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಪ್ರತಿ ಪಾದಿಸಿದೆ. ಆದರೆ, ದೇಶದಲ್ಲಿ ಮತಬ್ಯಾಂಕ್‌ ಮನಃಸ್ಥಿತಿ ಹೊಂದಿರುವವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸಲು ಮತ್ತು ಪ್ರಚೋದಿಸಲು ಯುಸಿಸಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಹಿಂದೆ ಯಾರ ಚಿತಾವಣೆ ಇದೆ ಎಂಬುದನ್ನು ನಾವೂ ನೋಡುತ್ತಿದ್ದೇವೆ.

ಯಾವ ಪಕ್ಷಗಳು ನಮ್ಮನ್ನು ಅನುಕೂಲ ಸಿಂಧು ರಾಜಕಾರಣಕ್ಕೆ ಬಳಸಿಕೊಂಡಿವೆ ಎಂಬುದು ದೇಶದ ಮುಸ್ಲಿಮರಿಗೂ ಗೊತ್ತಿದೆ’ ಎಂದು ಹೇಳಿದರು.

‘ಈ ಜನರು (ವಿರೋಧ ‍ಪಕ್ಷಗಳ ನಾಯಕರು) ನಮ್ಮ ಮೇಲೆ ಆರೋ‍ಪ ಹೊರಿಸುತ್ತಿದ್ದಾರೆ. ಮುಸ್ಲಿಮರು, ಮುಸ್ಲಿಮರು ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ, ಅವರಿಗೆ ನಿಜವಾಗಿ ಯೂ ಕಾಳಜಿ ಇದ್ದಿದ್ದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರು ಇಷ್ಟೊಂದು ಹಿಂದೆ ಏಕೆ ಇರುತ್ತಿದ್ದರು’ ಎಂದು ಅವರು ಪ್ರಶ್ನಿಸಿದ್ದಾರೆ.

.

 
 
 
 
 
 
 
 
 
 
 

Leave a Reply