ದಾಖಲೆ ಬರೆಯಲು ಸಜ್ಜಾದ ನರೇಂದ್ರ ಮೋದಿ

ಲೋಕಸಭಾ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಈ ಬಾರಿ ಕೂಡ ಎನ್‌ಡಿಎ ಬಹುಮತ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ವರದಿಗಳು ಹೇಳಿವೆ. ಒಂದು ವೇಳೆ ಇಂದು ಎನ್‌ಡಿಎ ಬಹುಮತ ಪಡೆದರೆ, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಯಾಗಲಿದ್ದು ಹಲವು ಹೊಸ ದಾಖಲೆ ನಿರ್ಮಾಣವಾಗಲಿವೆ.

ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿವೆ.

ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಿತು ಮತ್ತು ಕೊನೆಯ ಹಂತ ಜೂನ್ 1 ರಂದು ನಡೆದಿದ್ದು, ಇಂದು ಫಲಿತಾಂಶ ಹೊರಬೀಳಲಿದೆ.

 
 
 
 
 
 
 
 
 
 
 

Leave a Reply