ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜಿನ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಅನುಷ್ಟಾನ ಕಾರ್ಯಕ್ರಮ

ಅಜ್ಜರಕಾಡು ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಸಂಪೂರ್ಣ ಗಣಕೀಕೃತ ಸೇವೆಯನ್ನು ನೀಡುತ್ತಿದ್ದು, ಮಂಗಳೂರಿನ ಎಡ್‌ವೈಸ್ ಲರ್ನ್ ಸಂಸ್ಥೆಯ ಸಹಯೋಗದೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ಅನುಷ್ಟಾನಗೊಳಿಸಲಾಯಿತು.
ಪ್ರಾಂಶುಪಾಲರಾದ ಡಾ. ಭಾಸ್ಕರ್ ಎಸ್. ಶೆಟ್ಟಿರವರು ಚಾಲನೆ ನೀಡಿದರು. ಕಾಲೇಜಿನ ಗ್ರಂಥಾಲಯದಲ್ಲಿ ನೂತನವಾಗಿ ಆರಂಭಗೊoಡ ಈ ಸೇವೆಯಲ್ಲಿ ವಿದ್ಯಾರ್ಥಿನಿಯರು
ಯಾವುದೇ ಸಮಯದಲ್ಲಿ ಪಠ್ಯಪುಸ್ತಕಗಳು, ಓಇPಗೆ ಸಂಬoಧಪಟ್ಟ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಪರಾಮರ್ಶನ ಗ್ರಂಥಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು, ಪದವಿ ಪರೀಕ್ಷೆಗಳ ಹಳೆಯ ಪ್ರಶ್ನೆಪತ್ರಿಕೆಗಳು, ೯೦೦೦ ಸಾವಿರಕ್ಕೂ ಅಧಿಕ ವಿರಳ ಕನ್ನಡದ ಪುಸ್ತಕಗಳು ಹಾಗೂ ಇತರ ಮಾಹಿತಿಯನ್ನು ಮೊಬೈಲ್
ಮತ್ತು ಕಂಪ್ಯೂಟರ್‌ನ್ನು ಬಳಸಿಕೊಂಡು ಮಾಹಿತಿಯನ್ನು ಪಡೆಯಬಹುದು.
ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಶ್ರೀಮತಿ ಯಶೋದಾರವರು, ಎಡ್‌ವೈಸ್ ಲರ್ನ್ನ ಸಂಸ್ಥೆಯ ಸ್ಥಾಪಕರಾದ ಧೀರಜ್‌ರವರು ವಿಜ್ಞಾನ ವಿಭಾಗದ ಡೀನ್
ಪ್ರೊ, ಶ್ರೀಧರ್ ಪ್ರಸಾದ್, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸೋಜನ್ ಕೆ.ಜಿ, ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply