ಬಿಜೆಪಿಯ ಹಿರಿಯ ನಾಯಕ ಭರಣ್ಯ ಬಾಲಕೃಷ್ಣ ಭಟ್ ನಿಧನ

ಬಿಜೆಪಿಯ ಹಿರಿಯ ನಾಯಕ ಭರಣ್ಯ ಬಾಲಕೃಷ್ಣ ಭಟ್ (76ವ) ಜೂನ್ 28ರಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರು ಪಾಣಾಜೆ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪಾಣಾಜೆ ಮಂಡಲ ಪ್ರಧಾನರಾಗಿ, ಬಿಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯರಾಗಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಇದ್ದುಕೊಂಡು ಬಿಜೆಪಿಯನ್ನು ಕಟ್ಟಿ ಬೆಳೆಸಿರುತ್ತಾರೆ, ಇವರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿರುತ್ತಾರೆ. ಇವರ ನಿಧನಕ್ಕೆ ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು ಹಾಗೂ ಶ್ರೀಮತಿ ಶಕುಂತಲಾ ಶೆಟ್ಟಿ, ಸಂತಾಪಸೂಚಿಸಿರುತ್ತಾರೆ.

 
 
 
 
 
 
 
 
 
 
 

Leave a Reply