ಕೋಟೇಶ್ವರ : ಭಾರೀ ಮಳೆಗೆ ಮನೆಯ ಬಾವಿ ಕುಸಿತ!

ಕೋಟೇಶ್ವರ: ಅಂಕದಕಟ್ಟೆಯ ಗೋಪಾಡಿ ರಸ್ತೆಯ ನಿವಾಸಿ ಅಕ್ಕಮ್ಮ ದೇವಾಡಿಗ ಅವರ ಮನೆಯ ಬಾವಿ ಸುರಿದ ಭಾರೀ ಮಳೆಯಿಂದಾಗಿ ಜೂ. 29ರಂದು ಆವರಣ ಸಮೇತ ಕುಸಿದು ಬಿದ್ದಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೋಟೇಶ್ವರ, ಬೀಜಾಡಿ-ಗೋಪಾಡಿ ಪರಿಸರದಲ್ಲಿ ನೀರಿನ ಹೊರಹರಿವಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಲ್ಲಿ ಕೃತಕ ನೆರೆ ಕೂಡ ಕಂಡುಬಂದಿದೆ.

ಹಲವೆಡೆ ಬಾವಿ ಪರಿಸರದಲ್ಲಿ ನಿಂತ ನೀರಿನಿಂದಾಗಿ ಆಭಾಗ ಕುಸಿಯುವ ಭೀತಿ ಇರುವುದರಿಂದ ಗ್ರಾಮ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ನಿಂತ ನೀರನ್ನು ಹರಿದು ಬಿಡಲು ವ್ಯವಸ್ಥೆ ಮಾಡುವುದು ಸೂಕ್ತವೆಂದು ಗ್ರಾ.ಪಂ.ಸದಸ್ಯ ಲೋಕೇಶ ಅಂಕದಕಟ್ಟೆ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply