ನಿವೃತ್ತ ಶಿಕ್ಷಕ, ಬಹುಭಾಷಾ ಪಂಡಿತ ವಿದ್ವಾನ್ ಕೆರೆಮಠ ವಾದಿರಾಜ ಭಟ್ ನಿಧನ. 

ಮಲ್ಪೆ ಫಿಶರೀಸ್ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಕನ್ನಡ, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿದ್ದು, ಧಾರ್ಮಿಕ ಮಾರ್ಗದರ್ಶಕರಾಗಿದ್ದು ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ವಿದ್ವಾನ್ ಕೆರೆಮಠ ವಾದಿರಾಜ ಭಟ್ ಇವರು ಬುಧವಾರದಂದು ನಿಧನರಾದರು. ಕೆರೆಮಠ ಲಕ್ಷ್ಮೀನಾರಾಯಣ ಮಠದ ಗೌರವಾಧ್ಯಕ್ಷ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಕೊಡವೂರು ಶ್ರೀಶಂಕರನಾರಾಯಣ ದೇವಳದ ಲೆಕ್ಕಪತ್ರ ನೋಡಿ ಕೊಂಡು, ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಲ್ಲಿ ಮುಂಚೂಣಿಯಲ್ಲಿದ್ದು. ಶ್ರೀದೇವಳದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡವರು.

ಪತ್ನಿ, ಮೂವರು ಗಂಡು ಮಕ್ಕಳು ಮತ್ತು ಅಸಂಖ್ಯಾತ ಶಿಷ್ಯ ವೃಂದ, ಅಭಿಮಾನಿ ವೃಂದ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ  ನೀಡಲಿ ಹಾಗು ಮನೆಮಂದಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವೆವು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply