‘ಶ್ರೀರಾಮನ ಐದು ಶತಮಾನಗಳ ವನವಾಸ ಅಂತ್ಯ- ಆದರ್ಶ ಗೋಖಲೆ

ಕಾರ್ಕಳ : ‘ಶ್ರೀರಾಮನ ಐದು ಶತಮಾನಗಳ ವನವಾಸ ಅಂತ್ಯವಾಗಿ ಸರ್ವರ ಅಪೇಕ್ಷೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಲಭಿಸಿರುವುದು ಅಭಿಮಾನದ ವಿಚಾರ. ಕವಿಕೋಗಿಲೆಗಳ , ಸಾಹಿತ್ಯಾರಾಧಕರ ಸ್ಫೂರ್ತಿ , ಸ್ವರಾಜ್ಯ ಸ್ವಧರ್ಮ ನಿಷ್ಠರ ಪ್ರೇರಣೆ ಯಾಗಿರುವ ರಾಮನ ಆದರ್ಶಗಳ ಪಾಲನೆಯಿಂದ ಮಾತ್ರ ರಾಮರಾಜ್ಯದ ನಿರ್ಮಾಣ ಸಾಧ್ಯ. ಡಿಪಿ, ಸ್ಟೇಟಸ್ ಗಳಲ್ಲಿರುವ ರಾಮ ನನ್ನು ಹೃದಯದರಸನನ್ನಾಗಿ ಮಾಡಿ ನಡೆನುಡಿಗಳೆರಡರಲ್ಲೂ ರಾಮತ್ವದ ಆರಾಮವನ್ನು ಹೊಂದುವುದೇ ಇಂದಿನ  ಅಗತ್ಯತೆ ‘ ಎಂದು ಪ್ರೇರಣಾ ಫೌಂಡೇಶನ್ ಸಂಚಾಲಕ ಹಾಗೂ ಸಂಸ್ಕಾರ ಭಾರತಿ ಯುವ ವಿಭಾಗ ರಾಜ್ಯ ಕಾರ್ಯದರ್ಶಿ ಆದರ್ಶ ಗೋಖಲೆ ಹೇಳಿದ್ದಾರೆ.

ಅವರು ಬುಧವಾರ ಸಾಯಂಕಾಲ 6 ಗಂಟೆಗೆ ಕಾರ್ಕಳದ ಕೈಂಡ್ ಸಾಮಾಜಿಕ ಸೇವಾಸಂಸ್ಥೆ ಆಯೋಜಿಸಿದ ಅಯೋಧ್ಯೆ – ಸಿಂಹಾವಲೋಕನ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಾಲ್ಕು ಲಕ್ಷ ರಾಮಯೋಧರ ತ್ಯಾಗ – ಬಲಿದಾನ, ಎಂಭತ್ತಕ್ಕೂ ಹೆಚ್ಚು ಯುದ್ಧ , ನಿರಂತರ ಕಾನೂನು  ಹೋರಾಟದ ಫಲವಾಗಿ  ನಾವು ಕಾಣಲಿರುವ  ಆಚಂದ್ರಾರ್ಕ  ಮಂದಿರದ ಹಿನ್ನೆಲೆಯಲ್ಲಿ  ಪಿತೃಪ್ರೇಮ,  ಸತಿಸಖ್ಯ, ಭ್ರಾತೃವಾತ್ಸಲ್ಯ ಮೊದಲಾದ ರಾಮನ ಉನ್ನತ ಗುಣಗಳನ್ನು ಅಳವಡಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಬೇಕು’ ಎಂದು ಹೇಳಿದರು.

Leave a Reply