ಶಾಲೆ ಪುನರ್ ಆರಂಭ ~ಸುರೇಂದ್ರ ಪಣಿಯೂರು

ನಾನು ಕಲಿತ ಶಾಲೆ ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಣಿಯೂರು. ಬೆಳಪು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ.

ನನ್ನ ಬದುಕಿನಲ್ಲಿ ತಿದ್ದಿ ಬುದ್ಧಿ ಹೇಳಿದ ಶಾಲೆ .

ನಮ್ಮ ಊರಿನ ನೂರಾರು ಜನರನ್ನು ಪ್ರತಿಭಾವಂತರನ್ನಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸಿದ ಶಾಲೆ.

ಈ ಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಸುಮಾರು 700 ಸಂಖ್ಯೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯು ಈಗ ಈ ಶಾಲೆಯಲ್ಲಿ ಕೇವಲ 35 ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ ಅನ್ನುವುದು ವಿಷಾದನೀಯ. ಆದರೆ ನಮಗೂ ಛಲ!! ನಾವು ಕಲಿತ ಶಾಲೆಯನ್ನು ಮುಚ್ಚಗೊಡಲೇಬಾರದು ಎಂದು. ಆ ಧ್ಯೇಯದಿಂದ, ನಾವು ಈ ಶಾಲೆಯು ಅನುದಾನಿತ ಶಾಲೆಯಾಗಿದ್ದರೂ ಈಗ ಸರಕಾರದಿಂದ ಯಾವುದೇ ರೀತಿಯ ಅನುದಾನವಿಲ್ಲದೆ ಮುನ್ನಡೆಯುತ್ತಿದೆ. ಐದು ಜನ ಶಿಕ್ಷಕರನ್ನು ನಮ್ಮದೇ ಖರ್ಚಿನಲ್ಲಿ ನೇಮಿಸಿಕೊಂಡು, ಮಕ್ಕಳಿಗೆ ಸಮವಸ್ತ್ರ, ಕೊಡೆ, ಪುಸ್ತಕ, ಕಾಲಿಗೆ ಶೂ ಇತ್ಯಾದಿಗಳನ್ನು ಉದಾರ ದಾನಿಗಳಿಂದ ಪಡೆದು ಮಕ್ಕಳಿಗೆ ನೀಡಿ ಈ ಶಾಲೆಯನ್ನು ಮುನ್ನಡೆಸುತ್ತಿರುವ ನಮ್ಮ ಆಡಳಿತ ಮಂಡಳಿ. 

ಇಂದು ವಿದ್ಯಾಭ್ಯಾಸ ಆರಂಭ ಮಾಡಲಿರುವ ಎಲ್ಲಾ ಪ್ರಥಮ ದರ್ಜೆಯ ಪುಟಾಣಿಗಳಿಗೆ ಹಾಗೂ ಉಳಿದ ದರ್ಜೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ವಿದ್ಯಾರ್ಥಿಗಳಿಗೆ…

ಮಕ್ಕಳ ಮನಸ್ಸನ್ನು ಅರಿತು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು, ಮಕ್ಕಳ ಜೀವನಕ್ಕೆ ಸುಗಮ ದಾರಿ ತೋರಲಿರುವ ಶಾಲಾ ಗುರುಗಳಿಗೆ ಶುಭವನ್ನು ಕೋರಿ, ಸಿಹಿತಿಂಡಿ ನೀಡಿ ಸಂಭ್ರಮಿಸಿದೆ. 

 ~ಸುರೇಂದ್ರ ಪಣಿಯೂರು

 
 
 
 
 
 
 
 
 
 
 

Leave a Reply