ಇಂದ್ರಾಳಿ: ಸಂಸ್ಥಾಪಕರ ದಿನಾಚರಣೆ, ಶಾಲಾ ವಾರ್ಷಿಕೋತ್ಸವ

ಇಂದ್ರಾಳಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ
ವಾರ್ಷಿಕೋತ್ಸವವು ಅತ್ಯಂತ ಅದ್ಧೂರಿಯಾಗಿ ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎ.ವಿ.ಬಾಳಿಗ ಮೆಮೋರಿಯಲ್ ಅಸ್ಪತ್ರೆ, ಉಡುಪಿಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ.ವಿ.ಭಂಡಾರಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೋಷಕರು ತಮ್ಮ ಮಕ್ಕಳ ಚಲನ ವಲನಗಳ ಬಗ್ಗೆ ಜಾಗರೂಕರಾಗಿರಬೇಕು. ಅವರು ಪ್ರಯೋಗ ಮನೋಭಾವ ಮತ್ತು ಕುತೂಹಲದಿಂದ ಸಹಜವಾಗಿ ದಾರಿ ತಪ್ಪಬಹುದು. ಅವರಲ್ಲಿ ಸಮಸ್ಯೆಗಳನ್ನು
ಹಂಚಿ ಕೊಳ್ಳಲು ಹೇಳಬೇಕು. ಅಗತ್ಯ ಬಿದ್ದಾಗ ಸಮಲೋಚನೆ ನಡೆಸಬೇಕು ಮತ್ತು ಸೋಲನ್ನು ಎದುರಿಸುವುದು ಹೇಗೆ ಎಂದು ತಿಳಿಹೇಳಬೇಕು ಎಂದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳುತ್ತಾ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವಿನಾಯಕ ಕಿಣಿಯವರು ಶೈಕ್ಷಣಿಕ ವರ್ಷದ
ವಾರ್ಷಿಕ ವರದಿ ವಾಚಿಸಿದರು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿದ ಗೌತಮ್ ಮಲ್ಯ, ಪ್ರವ್ಯಾ ಆರ್ ಶೆಟ್ಟಿ, ಯಶಸ್ವಿ ಇವರು ವಿದ್ಯಾರ್ಥಿಗಳ ಹಸ್ತ ಪ್ರತಿ “ಲಹರಿ”ಯನ್ನು ಬಿಡುಗಡೆಗೊಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ಮತ್ತು ಕ್ರೀಡೆ, ಚಿತ್ರಕಲೆ, ಕರಾಟೆ,ಸೌಟ್ ಹಾಗೂ ಗೈಡ್ಸ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈ, ಶ್ರೀ.ಸಿ.ಕೆ.ಕಾಮತ್,ಶ್ರೀ.ರತ್ನಾಕರ ಶೆಣೈ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ವತಿಯಿಂದ ನಗದು ಬಹುಮಾನ ಮತ್ತು ರಕ್ಷಕ-ಶಿಕ್ಷಕ ಸಂಘದ ವತಿಯಿಂದ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವಿದ್ಯಾಅಮರ್ ಪೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಶ್ಮಾ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿ ನಾಯಕ ಅಣ್ಣಪ್ಪ ಪ್ರಭು ಸ್ವಾಗತಿಸಿ, ವಿಕಾಸ್ ದಿವಾಕರ್ ಹಾಗೂ ವೃದ್ಧಿ ಭಟ್ ನಿರೂಪಿಸಿ, ರೋಝಾ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಮನೋರಂಜನೆ ಮತ್ತು
ಶಶಿಪ್ರಭಾ ಪರಿಣಯ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply