ಮೂಡುಬಿದಿರೆ : ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೇರಳದಲ್ಲಿ ವಿವಾಹವಾಗಿ ಪತ್ತೆ!

ಮೂಡುಬಿದಿರೆಯ ಆಳ್ವಾಸ್‌ ವಿದ್ಯಾರ್ಥಿನಿ ಅದಿರಾ ನಾಪತ್ತೆ ಪ್ರಕರಣ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಶುಕ್ರವಾರ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ತನ್ನ ಪ್ರಿಯಕರನನ್ನು ಕೇರಳದಲ್ಲಿ ವಿವಾಹವಾಗಿ ಪತ್ತೆಯಾಗಿದ್ದಾಳೆ.

ಮೂಡುಬಿದಿರೆಯ ಆಳ್ವಾಸ್‌ ವಿದ್ಯಾ ಸಂಸ್ಥೆಯ ಬಿ.ಪಿ.ಟಿ. ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ 19 ವರ್ಷದ ಅದಿರಾ, ಉಡುಪಿ ಜಿಲ್ಲೆಯ ಕೊಲ್ಲೂರಿನವಳು. ವಿದ್ಯಾಗಿರಿಯಲ್ಲಿರುವ ಶಾಂಭವಿ ಹಾಸ್ಟೆಲ್‌ನ ಸಿ.ವಿಭಾಗದಲ್ಲಿ ವಾಸವಿದ್ದಳು. ಫೆ.23 ರಿಂದ ನಾಪತ್ತೆಯಾಗಿದ್ದಳು ಈಕೆ. ಈ ಪ್ರಕರಣದ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಫೆ.23ರ ಶುಕ್ರವಾರ ಬೆಳಿಗ್ಗೆ 7.45 ಕ್ಕೆ ಹಾಸ್ಟೆಲ್‌ನಿಂದ ಆಳ್ವಾಸ್‌ ಬಸ್‌ನಲ್ಲಿ ಬಂದಿದ್ದು, ನಂತರ ಮೂಡುಬಿದಿರೆ ಕನ್ನಡಭವನದ ಬಳಿ ಇಳಿದು ಹೋದ ಈಕೆ ಕಾಲೇಜಿಗೆ ಹೋಗದೆ, ಹಾಸ್ಟೆಲ್‌, ಮನೆಗೂ ಹೋಗದೆ ದಿಢೀರ್‌ ನಾಪತ್ತೆಯಾಗಿದ್ದಳು. ಇದೀಗ ಕೇರಳಕ್ಕೆ ತೆರಳಿ ತನ್ನ ಪ್ರಿಯಕರನನ್ನು ಮದುವೆಯಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

 
 
 
 
 
 
 
 
 
 
 

Leave a Reply