ಸೀತಾನದಿಯಲ್ಲಿ ಮುಳುಗಿ ಇಬ್ಬರು ಯುವಕರು ದಾರುಣ ಸಾವು!

ಹೆಬ್ರಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳೆಗೆ ಬಿದ್ದು ಇಬ್ಬರು ಯುವಕರು ಸಾವನಪ್ಪಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಶಿನು ಡ್ಯಾನಿಯಲ್(40) ಮತ್ತು ದೀಪಕ್ ಎಂ.ವಿ. ಮೃತ ಯುವಕರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿನ್ಸೆಂಟ್ ಎಂ. ಸಿ. ಮೋಹನ್ (34), ಶಿನು ಡ್ಯಾನಿಯಲ್(40) ಮತ್ತು ದೀಪಕ್ ಭಾನುವಾರ ಸಂಜೆ ಸ್ನಾನ ಮಾಡಲೆಂದು ಸೀತಾನದಿ ಹೊಳಗೆ ಹೋಗಿದ್ದರು. ಶಿನು ಡ್ಯಾನಿಯಲ್ ಹೊಳೆಯ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ ಅಕಸ್ಮಾತ್ ಆಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗುತ್ತಿದ್ದಾಗ ದೀಪಕ್, ಶಿನು ಡ್ಯಾನಿಯಲ್ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದು ಶಿನು ಡ್ಯಾನಿಯಲ್ ಹಾಗೂ ದೀಪಕ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

ಈ ಕುರಿತು ವಿನ್ಸೆಂಟ್ ಎಂ. ಸಿ. ಮೋಹನ್ ನೀಡಿದ ಮಾಹಿತಿಯಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 
 
 
 
 
 
 
 
 
 
 

Leave a Reply