ಮಲ್ಪೆ : ಸೆ.15ರ ವರೆಗೆ ಪ್ರವಾಸಿ ಚಟುವಟಿಕೆಗಳು ತಾತ್ಕಾಲಿಕ ಸ್ಥಗಿತ

ಮಲ್ಪೆ ಬೀಚ್‌, ಸೀವಾಕ್‌ ಪ್ರದೇಶದಲ್ಲಿ ನಡೆಸುವ ಎಲ್ಲ ರೀತಿಯ ಪ್ರವಾಸಿ ಬೋಟ್‌ ಚಟುವಟಿಕೆಗಳನ್ನು ಮತ್ತು ಸೈಂಟ್‌ ಮೆರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸೀ ಬೋಟ್‌ ಚಟುವಟಿಕೆ ಮೇ 16ರಿಂದ ಸೆ. 15ರ ವರೆಗೆ ಹಾರ್ಬರ್‌ ಕ್ರಾಫ್ಟ್ ನಿಯಮಗಳ ಅನ್ವಯ ಸ್ಥಗಿತಗೊಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.

 
 
 
 
 
 
 
 
 
 
 

Leave a Reply