Janardhan Kodavoor/ Team KaravaliXpress
23 C
Udupi
Thursday, January 28, 2021

ಶೇಕಡಾ 2 ಆದಾಯ ಗೋಗ್ರಾಸಕ್ಕೆ ಶೀಘ್ರ ಸುತ್ತೋಲೆ 

ರಾಜ್ಯದಲ್ಲಿ ಪೇಜಾವರ ಮಠಾಧೀಶರಂತಹ ಅನೇಕ ಮಹನೀಯರು ಸಮಯ ​, ಶ್ರಮ ಬಹಳಷ್ಟು  ಎಲ್ಲ ತ್ಯಾಗ ಮಾಡಿ ಗೋರಕ್ಷಣೆಯ ಕಾರ್ಯದಲ್ಲಿ ನಿರತಾಗಿರುವುದು ಸಮಾಜದ ಸಭ್ಯತೆಯ ಲಕ್ಷಣ . ಇಂಥಹ ಮಾನವೀಯ ಹಾಗೂ ಪುಣ್ಯದ  ಕಾರ್ಯಗಳಿಗೆ ಸಹಾಯ ನೀಡು ವುದು ಸಮಾಜ ​ಹಾಗು ​ಸರಕಾರಗಳ ಕರ್ತವ್ಯವಾಗಿದೆ ​.  ಆದ್ದರಿಂದ ರಾಜ್ಯದ ಎ , ಬಿ ಗ್ರೇಡ್ ದೇವಳಗಳ ವಾರ್ಷಿಕ ಆದಾಯದ ಶೇಕಡಾ ಎರಡು ಆದಾಯವನ್ನು ವಾರ್ಷಿಕವಾಗಿ ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳಿಗೆ ನೆರವು ನೀಡಲು ಅನುವಾಗುವಂತೆ ಶೀಘ್ರ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ಮುಜರಾಯಿ ಇಲಾಖೆಯ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂಬ ಮಹತ್ವದ ತೀರ್ಮಾನವನ್ನು ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ್ದಾರೆ .

ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಕುಶಲೋಪರಿ ವಿಚಾರಿಸಲು ನೀಲಾವರ ಗೋಶಾಲೆಯ ಆವರಣದಲ್ಲಿರುವ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಗೋಶಾಲೆಗಳ ನಿರ್ವಹಣೆಯ ಕುರಿತಾಗಿ ಸುದೀರ್ಘ ಸಮಾ ಲೋಚನೆ ನಡೆಸಿ ಈ ತೀರ್ಮಾನ ಪ್ರಕಟಿಸಿದರು . ಹಿಂದೂ ನಂಬಿಕೆಯನುಸಾರ ಗೋವುಗಳಿಗೆ ಪ್ರತೀ ಮನೆಯಲ್ಲೂ ಆಶ್ರಯ ನೀಡಿ ನಿತ್ಯ ಗೋವುಗಳಿಗೆ ಆಹಾರ ನೀಡಿದ ಬಳಿಕವೇ ಮನೆಮಂದಿ ಆಹಾರ ಸ್ವೀಕರಿಸುವುದು  ಕಡ್ಡಾಯ . ಆದರೆ ಪ್ರಸ್ತುತ ಮನೆಗಳಲ್ಲಿ ಗೋಸಾಕಣೆಗೆ ಜನ‌ ಅನೇಕ ಕಾರಣಗಳಿಂದ ಹಿಂದೇಟು ಹಾಕುತ್ತಿದ್ದಾರೆ . ಆದ್ದರಿಂದ ಗೋಶಾಲೆಗಳಲ್ಲೇ ಗೋವುಗಳಿಗೆ ಆಶ್ರಯ ಎಂಬ ಸ್ಥಿತಿ ನಿರ್ಮಾಣ ವಾಗಿದೆ . ಆದರೆ ಇವುಗಳ  ನಿರ್ವಹಣೆ ದೊಡ್ಡ ಸವಾಲಿನ‌ ಕೆಲಸವಾಗಿದೆ ​. ಆದ್ದರಿಂದ ದೇವಳಗಳಲ್ಲಿನ ಭಕ್ತರ ಕಾಣಿಕೆಯ ಆದಾಯದ ಒಂದು ಭಾಗವನ್ನು ಗೋಶಾಲೆಗಳಿಗೆ ನೀಡುವುದರಿಂದ ಜನರಿಗೆ ಗೋಗ್ರಾಸ ನೀಡಿದ ಪುಣ್ಯವಾದರೆ ದೇವಳಗಳು ಗೋರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ ಹಾಗೂ ಗೋಶಾಲೆಗಳಿಗೆ ಒಂದಷ್ಟು ಆರ್ಥಿಕ ಶಕ್ತಿ ನೀಡಿದಂತಾಗುತ್ತದೆ . ನಮ್ಮೆಲ್ಲರ ಮಾರ್ಗ

ದರ್ಶಕರಾಗಿದ್ದ ದಿವಂಗತ ಡಾ ವಿ ಎಸ್ ಆಚಾರ್ಯರು ಈ ಹಿಂದೆ ಮಂತ್ರಿಗಳಾಗಿದ್ದಾಗ ಈ ಚಿಂತನೆ ನಡೆದಿರುವುದು   ನನ್ನ ಗಮನಕ್ಕೆ ಬಂದಿದೆ . ಶೀಘ್ರವೇ ಅದನ್ನು ಅನುಷ್ಢಾನಕ್ಕೆ ತರಲಾಗುವುದು ಎಂದು ಸಚಿವ ಕೋಟ ವಿವರಿಸಿದರು .

 ಗೋಮಾಳ ಭೂಮಿ ಮೇವು ಬೇಳೆಸಲು ಗೋಶಾಲೆಗೆ : ಚಿಂತನೆ 
ನೂರಾರು ಗೋವುಗಳನ್ನು ಪೋಷಿಸಲು ದೊಡ್ಡ ಪ್ರಮಾಣದ ಮೇವು ಅಗತ್ಯ ಇದೆ . ಆದ್ದರಿಂದ ಜಿಲ್ಲಾವಾರು ಲಭ್ಯ ಇರುವ ಗೋಮಾಳ ಭೂಮಿಗಳನ್ನು ಮೇವು ಬೆಳೆಸುವ ಉದ್ದೇಶಕ್ಕೆ ನೋಂದಾಯಿತ ಗೋಶಾಲೆಗಳಿಗೆ ನೀಡುವ ಕುರಿತಾಗಿಯೂ ಶೀಘ್ರವೇ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಇದೇ ಸಂದರ್ಭ ಸಚಿವರು ತಿಳಿಸಿದರು . ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲಾ ವೆಬ್ ಸೈಟ್ ಉದ್ಘಾಟನೆ

 ಶಾಲೆಯ ಬೆಳವಣಿಗೆಯ ಸುಂದರ ಕ್ಷಣ ಸವಿಯಲು ವೆಬ್ ಸೈಟ್ ಅತ್ಯಂತ ಪ್ರಯೋಜನಕಾರಿ ಅದು ಎಲ್ಲಾ ಜನರಿಗೆ ಕ್ಷಣ ಮಾತ್ರದಲ್ಲಿ ತಲುಪಿಸಲು ಸುಗಮ ದಾರಿ ಇದಾಗಿದೆ ಎಂದು ಮಣಿಪಾಲ ಕ್ಯಾರಿಯರ್ ಅಕಾಡೆಮಿ ಮಣಿಪಾಲದ ಪ್ರಾಂಶುಪಾಲ...

ಮೋದಿ ಬಿಗ್ರೇಡ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ: ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ ,ಶ್ರೀ ಧರ್ಮಸ್ಥಳ ಆಯುರ್ವೇದ ಉದ್ಯಾವರದ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ...

“ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021” (ಈಶ ಸೇವೆಯೊಂದಿಗೆ ಕಲಾ ಸೇವೆ}  

ಮಹತೋಬಾರ  ಕೊಡವೂರು ಶ್ರೀ ಶಂಕರನಾರಾಯಣ ರಾಶಿಪೂಜೆ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋ ಗ್ರಾಪರ್ಸ್  ಅಸೋಷಿಯೇಷನ್  ಉಡುಪಿ ವಲಯ ಆಯೋಜಿಸುವ " ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021" (ಈಶ ಸೇವೆಯೊಂದಿಗೆ...

 ನಾಳೆ ನಡೆಯಲಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಲಾಂ ಕಲಾಂ’ ಕಾರ್ಯಕ್ರಮ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಡಾ | ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಕಾರದಲ್ಲಿ ಗುರುವಾರ...

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹುತಾತ್ಮರ ಅಭಿಯಾನಕ್ಕೆ ಚಾಲನೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತೃತ್ವದಲ್ಲಿ ನಡೆದ ಹುತಾತ್ಮರ ಅಭಿಯಾನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದ ಮಹಾಸ್ವಾಮಿಗಳಿಂದ ಚಾಲನೆ ದೊರೆಯಿತು. ಗಣರಾಜ್ಯೋತ್ಸವದಂದು ಸಂಗೊಳ್ಳಿ ರಾಯಣ್ಣನ ಸಮಾಧಿಯಿಂದ...
error: Content is protected !!