ಸಹಾಯಕ್ಕಾಗಿ ರೋಧಿಸುತ್ತಿದ್ದ ವೃದ್ಧರ ರಕ್ಷಣೆ

ಉಡುಪಿ ನವೆಂಬರ್ 6:- ಆದಿ ಉಡುಪಿ ಮೀನು ಮಾರುಕಟ್ಟೆ ಬಳಿ ಬೆಳಿಗ್ಗಿನ ಜಾವ ಅನಾರೋಗ್ಯದಿಂದ ಮತ್ತು ಮತ್ತು ಹಸಿವಿನಿಂದ ಕಂಗೆಟ್ಟ ವೃದ್ಧರೋರ್ವರು ಏಳಲಾಗದೆ ಸಹಾಯ ಮಾಡಿ ಎಂದು ಯಾಚಿಸುತ್ತಿದ್ದವರನ್ನು ವಿಶು ಶೆಟ್ಟಿಯವರು ರಕ್ಷಣೆ ಮಾಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೃದ್ಧರು ಸಿರಿಲ್ ಡೆಮೆಲ್ಲೋ (70 ವ) ಶಂಕರಪುರದವರೆಂಬ ಮಾಹಿತಿ ಇದೆ. ಬೆಳಗ್ಗಿನ ಜಾವ ಯಾರೋ ತನ್ನನ್ನು ಇಲ್ಲಿ ತಂದು ಬಿಟ್ಟು ಹೋಗಿದ್ದಾರೆ ಎಂದು ಹೇಳುತ್ತಾರೆ, ವೃದ್ಧರು ತೀರಾ ಅನಾರೋಗ್ಯದ ಪರಿಸ್ಥಿತಿಯಲ್ಲಿದ್ದಾರೆ.
ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.ರಕ್ಷಣಾ ಕಾರ್ಯದಲ್ಲಿ ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply