ವಾಷಿಂಗ್ಟನ್ ರಾಜ್ಯದ ಸೆನೆಟರ್ ಶ್ರೀ ಡೆರೆಕ್ ಸ್ಟ್ಯಾನ್ ಫೋರ್ಡ್ ರವರಿಗೆ ಪರ್ಯಾಯಕ್ಕೆ ಆಹ್ವಾನ

ವಾಷಿಂಗ್ಟನ್ ರಾಜ್ಯದ ಸೆನೆಟರ್ ಶ್ರೀ ಡೆರೆಕ್ ಸ್ಟ್ಯಾನ್ ಫೋರ್ಡ್ಅಮೆರಿಕಾದ ಸಿಯಾಟಲ್ ನಗರದ , ವಾಷಿಂಗ್ಟನ್ ರಾಜ್ಯದ ಸೆನೆಟರ್ ಶ್ರೀ ಡೆರೆಕ್ ಸ್ಟ್ಯಾನ್ ಫೋರ್ಡ್ ಅವರು ಪೂಜ್ಯ ಶ್ರೀಪಾದರನ್ನು ಸಿಯಾಟಲ್ ಮಠದಲ್ಲಿ ಭೇಟಿಯಾದರು.

ಪೂಜ್ಯ ಶ್ರೀಪಾದರು ಭಾರತೀಯ ಸನಾತನ ಸಂಸ್ಕೃತಿ ಬಗ್ಗೆ ಸ್ಥೂಲ ಪರಿಚಯ ನೀಡಿ ಭಗವದ್ಗೀತೆಯ ಶಾಂತಿ ಸಂದೇಶವನ್ನು ವಿವರಿಸಿದರು.

ಡೆರೆಕ್ ಅವರು ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ಪುಸ್ತಕವನ್ನು ಸ್ವೀಕರಿಸಿ ಶ್ರೀಗಳ ಕಾರ್ಯವನ್ನು ಪ್ರಶಂಸಿಸಿದರು.

ಪೂಜ್ಯ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಸೆನೆಟರ್ ಅವರನ್ನು ಆಹ್ವಾನಿಸಿದರು.

 
 
 
 
 
 
 
 
 
 
 

Leave a Reply