ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ  ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿನೆ 

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ವತಿಯಿಂದ ಉಡುಪಿಯ ರಾಮ ಭವನ ಹೋಟೆಲ್ ಸಂಕಿಣ೯ದಲ್ಲಿ ಈ ವರ್ಷ  ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಸಹಿತ ಅಭಿನಂದಿಸಲಾಯಿತು .

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪಿಯುಸಿ ವಿದ್ಯಾರ್ಥಿನಿ ಅಭಿಜ್ಞಾ ಎಸ್. ರಾವ್, ನಾಲ್ಕನೇ ಸ್ಥಾನ ಪಡೆದ ಮೇಧಾ ಎನ್. ಭಟ್ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಭವ್ಯ ನಾಯಕ್ ಅವರನ್ನು ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಅಶೋಕ್ ಕಾಮತ್, ಸಂಸ್ಥೆಯ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷರಾದ ಪ್ರೊಫೆಸರ್ ಶಂಕರ್ ಅಭಿನಂದಿಸಿದರು…

ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಹೆಚ್. ಪಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮರವಂತೆ ನಾಗರಾಜ್ ಹೆಬ್ಬಾರ್ ಧನ್ಯವಾದ ನೀಡಿದರು. ಇದೇ ಸಂದರ್ಭದಲ್ಲಿ ಪ್ರಭಾ ವಿ. ಶೆಣೈ, ಮಾಜಿ ನಗರಸಭಾ ಸದಸ್ಯ ಶ್ಯಾಂಪ್ರಸಾದ್ ಕುಡ್ವ, ಪ್ರತಿಷ್ಠಾನದ ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ ,ವಿವೇಕಾನಂದ ಎನ್, ಪೂರ್ಣಿಮಾ ಜನಾರ್ಧನ್ ,ಸುಮಿತ್ರಾ ಕೆರೆಮಠ , ರಂಜಿತಾ ಶೇಟ್, ರಾಧಿಕಾ ಭಟ್ ,ನಂದಾ ಪೇಟ್ಕರ್, ಮಹೇಶ್ ಮಲ್ಪೆ ,ಶ್ರೀ ಲಕ್ಷ್ಮೀ ಅಚಾರ್ಯ, ಭಾವನ ಕೆರೆಮಠ ಮತ್ತಿತರರು ಉಪಸ್ಥಿತರಿದ್ದರು.

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply