ಬಾಲಿವುಡ್ ನಟಿ ಕಂಗನಾ ರನೌತ್ ಸ್ಪೋಟಕ ಹೇಳಿಕೆ

ಕೆಲವುದಿನಗಳಿಂದ ಸಿನೆಮಾ ರಂಗದಲ್ಲಿ ವ್ಯಾಪಕವಾಗಿ ಡ್ರಗ್ಸ್ ಬಳಕೆ ಹೆಚ್ಚುತ್ತಿವೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ ಇಂದು ಸ್ಪೋಟಕ ಹೇಳಿಕೆಯನ್ನು ಟ್ವಿಟರ್ ಮಾಧ್ಯಮದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಚೇರಿಗೆ ಟ್ಯಾಗ್ ಮಾಡುವ ಮೂಲಕ ನೀಡಿದ್ದಾರೆ. 

“ನಟರಾದ ರಣವೀರ್ ಸಿಂಗ್, ರಣ್ಬಿರ್ ಕಪೂರ್ ಮತ್ತು ವಿಕ್ಕಿ ಕೌಶಿಕ್ ಮಾದಕ ದೃವ್ಯ ಸೇವನೆಗೆ ಸಂಬಂಧಿಸಿದಂತೆ ತಮ್ಮ ರಕ್ತದ ಮಾದರಿಗಳನ್ನು ಪರೀಕ್ಷೆಗೆ ನೀಡುವ ಮೂಲಕ ಮೂರು ಮಂದಿ ಕೊಕೈನ್ ವ್ಯಸನಿಗಳು ಎಂದು ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಳಿ ಸುದ್ಧಿಗಳು ತಪ್ಪು ಎಂದು ಸಾಬೀತುಪಡಿಸಿ ಅಸಂಖ್ಯಾತ ಯುವಜನರಿಗೆ ತಾವು ಶುದ್ಧಹಸ್ತರು ಎಂದು ತೋರಿಸಬೇಕು” ಎಂದು ನಟಿ ಕಂಗನಾ ರನೌತ್ ತಿಳಿಸಿದ್ದಾರೆ. ಈ ಸ್ಪೋಟಕ ಹೇಳಿಕೆಯು ಇಡೀ ಬಾಲಿವುಡ್ ಅನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ಟ್ವೀಟ್ ಮಾಡಿರುವ ನಟಿ ಕಂಗನಾ, “ನಾನೊಬ್ಬಳೇ ನನ್ನ ಜೀವದ ಹಂಗು ತೊರೆದು ಬಾಲಿವುಡ್ ನಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಮಾತನಾಡಬೇಕಾಗಿಲ್ಲ. ಪ್ರತಿಯೊಬ್ಬರಲ್ಲಿಯೂ ಕೂಡ ನಮ್ಮ ದೇಶವು ಮಾದಕ ಮುಕ್ತ ರಾಷ್ಟ್ರವಾಗಬೇಕು ಎಂಬ ಕಳಕಳಿ ಇರಬೇಕು” ಎಂದಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಕಂಗನಾ ರವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿ ಎಂದು ಬಿಜೆಪಿ ಮಹಾರಾಷ್ಟ್ರ ಸರ್ಕಾರಕ್ಕೆ ವಿನಂತಿ ಮಾಡಿದೆ.

Leave a Reply