​ಅಗಸ್ಟ್ 29: ಉಡುಪಿ ಜಿಲ್ಲೆಯಲ್ಲಿ ​ಶನಿವಾರ 941 ನೆಗೆಟಿವ್ 

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 172 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11259 ಕ್ಕೆ ಏರಿಕೆಯಾಗಿದೆ.ಸೋಂಕಿತರಲ್ಲಿ ಉಡುಪಿಯ 107, ಕುಂದಾಪುರದ 19, ಕಾರ್ಕಳದ 37 ಹಾಗೂ ಇತರೆ ಜಿಲ್ಲೆಗಳ 9 ರೋಗಿಗಳು ಇದ್ದಾರೆ. 64 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 108ಮಂದಿಗೆ ಲಕ್ಷಣಗಳು ಇಲ್ಲ.

ಪ್ರಾಥಮಿಕ ಸಂಪರ್ಕದಿಂದ 90, ಐಎಲ್ಐ ಲಕ್ಷಣಗಳಿರುವ 45, ‘ಸಾರಿ’ ಲಕ್ಷಣಗಳಿರುವ 1 ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 2 ಮಂದಿಗೆ ಸೋಂಕು ತಗುಲಿದ್ದು, 34 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 789 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.​ 

ಜಿಲ್ಲೆಯಲ್ಲಿ ಶನಿವಾರ 219 ಮಂದಿ ಗುಣಮುಖರಾಗಿದ್ದು ಇದುವರೆಗೂ 8603 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2561 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 95 ಮಂದಿ ಸಾವನಪ್ಪಿದ್ದಾರೆ.​
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply