ಉಡುಪಿ ಜಿಲ್ಲೆಯಲ್ಲಿಂದು 625 ನೆಗೆಟಿವ್, 182 ಮಂದಿಗೆಪಾಸಿಟಿವ್ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 182 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಜಿಲ್ಲೆಯಲ್ಲಿ​ ​ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4674 ಕ್ಕೆ ಏರಿಕೆಯಾಗಿದೆ.​ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 977 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.​ ಭಾನುವಾರ 625 ವರದಿಗಳು ನೆಗೆಟಿವ್ ಬಂದಿದ್ದು, ​ಇನ್ನೂ ​616 ವರದಿಗಳು ಬರುವುದು ಬಾಕಿ ಇದೆ.​ 

ಭಾನುವಾರ ಸೋಂಕಿನ ಲಕ್ಷಣಗಳು ಕಂಡುಬಂದ 29 ಮಂದಿಗೆ ಐಸೊಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 2696 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.1943 ಸಕ್ರಿಯ ಪ್ರಕರಣಗಳು ಬಾಕಿ ಇವೆ.

Leave a Reply