ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ಮಾಡಿದ ಮುಖ್ಯಮಂತ್ರಿ

ವಜುಭಾಯಿ ವಾಲಾ ಅವರಿಂದ ಬುಲಾವ್​ ಬಂದ ಹಿನ್ನೆಲೆಯಲ್ಲಿ ರಾಜಭವನಕ್ಕೆ ದಿಢೀರ್​ ಭೇಟಿ ನೀಡಿದ್ದ ಸಿಎಂ, ರಾಜ್ಯಪಾಲರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿ 10 ನಿಮಿಷಗಳ ಕಾಲ ಚರ್ಚಿಸಿದರು.

 ರಾಜ್ಯಪಾಲರ ಭೇಟಿ ವೇಳೆ ಸಿಎಂಗೆ ಸಾಥ್ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ರಾಜ್ಯಪಾಲರು ನಮ್ಮನ್ನು ಕರೆದಿದ್ದರು. ಕೆಲ ವಿಷಯಗಳ ಬಗ್ಗೆ ಚರ್ಚಿಸಿದರು. ಕರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತಷ್ಟು ಕ್ರಮವಹಿಸಲು ಸೂಚಿಸಿದರು. ಆಯುರ್ವೇದಕ್ಕೆ ಒತ್ತು ಕೊಡುವಂತೆ ಸಲಹೆ ನೀಡಿದರು’ ಎಂದು ತಿಳಿಸಿದರು. ‘ಡ್ರಗ್ಸ್ ವಿರುದ್ಧ ಸಾರಿರುವ ಸಮರಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ದಂಧೆಕೋರರನ್ನು ಮಟ್ಟಹಾಕಲು ಸಲಹೆ ನೀಡಿದರು. 

ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿದ ಬೆನ್ನಲ್ಲೇ ಸಚಿವ ಸಂಪುಟ‌ ವಿಸ್ತರಣೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆಕಾಂಕ್ಷಿಗಳ ಲಾಬಿ ಚುರುಕಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply