ವಾರಿಯರ್ಸ್ ಗೌರವಿಸುವ ಮೂಲಕ ವರಮಹಾಲಕ್ಷ್ಮೀ ಪೂಜೆ

 ಅಸುರರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಶಕ್ತಿ ಉಪಾಸನೆಗಾಗಿ ಒಂದಲ್ಲಾ ಒಂದು ವ್ರತವನ್ನು ಮಾಡುವುದು ಅವಶ್ಯಕವಿದೆ ಎಂದು ಧರ್ಮ ಶಾಸ್ತ್ರ ಹೇಳುತ್ತದೆ. ಇಂದು ಕೊರೊನ ಎಂಬ ಅಸುರನಿಂದ ಸಮಾಜ ವನ್ನು  ರಕ್ಷಿಸುವಲ್ಲಿ ಈ ನಮ್ಮ ಕೊರೊನ ವಾರಿಯರ್ಸ್ ಮಹತ್ವದ ಪಾತ್ರ ವಹಿಸಿದ್ದಾರೆ. ಈ ವರ್ಷದ ವರ ಮಹಾಲಕ್ಷ್ಮಿ ಪೂಜೆಯಲ್ಲಿ ಅವರಿಗೆ ಗೌರವ ಸಮರ್ಪಿಸುವ ಮೂಲಕ ಆಚರಿಸಿಕೊಂಡಿದ್ದೇವೆ ​ಎಂದು ​ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ ಶಂಕರ್ ರವರು ಅಭಿಪ್ರಾಯ ಪಟ್ಟರು 

 ಉಡುಪಿ ಜಿಲ್ಲಾ ಮಹಿಳಾ ಕೊರೊನ ವಾರಿಯರ್ಸ್ ಗೆ ಗೌರವ ಸಮರ್ಪಣೆ : ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶಿಷ್ಟ ರೀತಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಆಚರಣೆ.  ಆಶಾಕಾರ್ಯಕರ್ತೆಯೋರ್ವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೌರವ ಸಮರ್ಪಿಸಿದರು.

ಕೊರೊನ ನಿರ್ವಹಣೆಗಾಗಿ ಉಡುಪಿ ದಕ್ಷಿಣ ಕನ್ನಡ ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಜೊತೆ ಕೈಜೋಡಿಸಿ ಸುಮಾರು ಮೂರು ಕೋಟಿಗೂ ಮಿಕ್ಕಿದ ಕೊರೊನ ರಕ್ಷಣಾ ಪರಿಕರಗಳನ್ನು ನೀಡಿದ ಜಿ ಶಂಕರ್ ರವರು ಇದೀಗ ಉಡುಪಿ ಜಿಲ್ಲೆಯಲ್ಲಿ ಕೊರೊನ ನಿರಂತರ ಏರುಗತಿಯಲ್ಲಿದ್ದು, ಕೊರೊನ ಸೋಂಕು ಸಮುದಾಯ ಹರಡುವಿಕೆಯತ್ತ ತನ್ನ ಕಬಂದ ಬಾಹುಗಳನ್ನು  ಚಾಚುತ್ತಿ ರುವ ಅಪಾಯದ ಹಿನ್ನೆಲೆಯಲ್ಲಿಯೂ ಉಡುಪಿ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತರು, ವೈದ್ಯರು, ದಾದಿಯರು, ಆಯನವರು, ಸಿಬ್ಬಂದಿ ವರ್ಗದವರು  ತಮ್ಮ ಜೀವದ ಹಂಗು ತೊರೆದು ಜನರ ಸಮಸ್ಯಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿರುವುದನ್ನು ಮನಗಂಡು ವರಮಹಾಲಕ್ಷ್ಮಿ ಪೂಜೆಯ ಸುಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ 1100, ಟಿ ಎಮ್ ಎ ಪೈ ಆಸ್ಪತ್ರೆಯ 221, ಕುಂದಾಪುರ ಕೋವಿಡ್ ಆಸ್ಪತ್ರೆಯ 91, ಕಾರ್ಕಳ ಕೋವಿಡ್ ಆಸ್ಪತ್ರೆಯ 48 ಮಂದಿ ಮಹಿಳಾ ಕೊರೊನ ವಾರಿಯರ್ಸ್ ಗೆ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯವನ್ನು  ವಿನಿಯೋಗಿಸಿ  ಗೌರವ ಸಮರ್ಪಣೆಯ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು. ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ ರವರು ಸಾಂಕೇತಿಕವಾಗಿ  ಸಮಾಜಕ್ಕೆ ಅವರಿಂದ ಇನ್ನಷ್ಟು ಹೆಚ್ಚಿನ ಸೇವೆ ಸಿಗುವಂತಾಗಲಿ ಎಂದರು.
ಕೋವಿಡ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ 4 ಹಾಗೂ ದಕ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ 2  ಸೇರಿ, ಒಟ್ಟು ಆರು ವೆಂಟಿಲೇಟರ್ಗಳನ್ನು ಸುಮಾರು 56 ಲಕ್ಷ ರೂಪಾಯಿ ವೆಚ್ಚದಲ್ಲಿ  ಆಗಸ್ಟ್ ತಿಂಗಳಿನನೊಳಗೆ ಟ್ರಸ್ಟ್ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರಾದ ಶಿವ ಎಸ್ ಕರ್ಕೇರ ಮತ್ತು ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು. 

Leave a Reply