ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಡುಪಿ ಹಾಗೂ ಯು. ಕಮಲಾ ಬಾಯಿ ಪೌಢಶಾಲೆ ಕಡಿಯಾಳಿ, ಉಡುಪಿ ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಪ್ರಯೋಜಿತ ಸಂಸ್ಥೆ ಇವರ ಸಹಯೋಗದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿ ಗಳ “ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ” ಈ ನವೆಂಬರ್ ತಿಂಗಳ 14,15,16 ರಂದು ಒಟ್ಟು 3 ದಿನಗಳ ಕಾಲ ನಡೆಯಿತು.  

ಯು. ಕಮಲಾ ಬಾಯಿ ಪೌಢಶಾಲೆ ಕಡಿಯಾಳಿಯಲ್ಲಿ ನಡೆದ “ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ”ದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

*ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಎಚ್. ಎಸ್ ಬಳ್ಳಾಲ್ ಉದ್ಘಾಟಿಸಿದರು  ರಾಷ್ಟ್ರೀಯ ಬ್ಯಾಡ್ಮಿಂಟನ್ ಅಟಗಾರು, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಯು. ವಿಮಲ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು

ಯು. ಕಮಲಾ ಬಾಯಿ ಪೌಢಶಾಲೆ, ಕಡಿಯಾಳಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಪ್ರತಾಪ್ ಕುಮಾರ್, ಉಜ್ವಲ್ ಡೆವಲಪರ್ಸ್ ನ ಪುರುಶೋತ್ತಮ್ ಶೆಟ್ಟಿ, ಐ ಸ್ಪೋರ್ಟ್ಸ್ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಬೆಂಗಳೂರು ಇದರ ಚೀಫ್ ಕೋಚ್ ಯಶು ಕುಮಾರ್, ಫಾರ್ಮರ್ ನ್ಯಾಷನಲ್ ಬ್ಯಾಡ್ಮಿಂಟನ್ ಪ್ಲೇಯರ್ ಸೊಹೇಲ್ ಅಮೀನ್, ಜಿ ಎಂ ವಿದ್ಯಾನಿಕೇತನದ ಅಧ್ಯಕ್ಷ ಶ್ರೀ ಪ್ರಕಾಶಚಂದ್ರ ಶೆಟ್ಟಿ ಅತಿಥಿಗಳಾಗಿದ್ದರು,
ಪಂದ್ಯಾಟ ಸಂಘಟನಾ ಸಮಿತಿಯ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ವಿಜಯೇಂದ್ರ ವಸಂತ್ ಸ್ವಾಗತಿಸಿದರು ಯು. ಕಮಲಾ ಬಾಯಿ ಪೌಢಶಾಲಾ ಕಡಿಯಾಳಿ ಇದರ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ, ಪ್ರಧಾನ ಕಾರ್ಯದರ್ಶಿ ಗಳಾದ ಕಿಶೋರ್ ಕುಮಾರ್, ಯ. ಕಮಲಾ ಬಾಯಿ ಪೌಢಶಾಲಾ ಮುಖ್ಯೋಪಾಧ್ಯಾಯರಾದ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply