Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಆರೂರು ಮಹತೋಭಾರ ಶ್ರೀವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ ಅಪಘಾತ ಸ್ಟಾರ್ ಹೆಲ್ತ್ ವಿಮಾ ಕಾರ್ಡ್ ಮತ್ತು ಸಮವಸ್ತ್ರ ವಿತರಣೆ

ಸ್ವಾವಲಂಬಿ ಭಾರತ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ವಿಷ್ಣುಮೂರ್ತಿ ಯುವಕ ಮಂಡಲ ಸಹಕಾರದಿಂದ 18 ನೇ ಶಾಲೆ, ಆರೂರು ಶಾಲೆಗೆ ಎಲ್ಲಾ ವಿದ್ಯಾರ್ಥಿಗಳಿಗೆ 41 ಲಕ್ಷದ 4 ಸಾವಿರದ ವಿಮಾಮೊತ್ತ ದ ಉಚಿತ ಅಪಘಾತ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ವಿಮಾ ಕಾರ್ಡ್ ವಿತರಣೆ (ದಾನಿಗಳು ಸುರೇಶ್ ಸೇರಿಗಾರ್ , ಸಮವಸ್ತ್ರ(ಲಿಟಲ್ ರಾಕ್ ಧಾನಿಗಳು ) ಕಾರ್ಯಕ್ರಮವು ದಿನಾಂಕ 30.10.2022 ರಂದು ಆರೂರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು ۔
ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿರುವ ಶ್ರೀ ಎ. ರತ್ನಾಕರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಒಳ್ಳೆಯ ಮಾದರಿಯ ಅಭಿವೃದ್ಧಿಯ ಕೆಲಸಗಳಿಗೆ ಶುಭ ಹಾರೈಸಿದರು.
ಗೌರವ ಉಪಸ್ಥಿತಿಯಲ್ಲಿ ಜಿಲ್ಲಾ ಪ್ರಮುಖ್- ಸ್ವಾವಲಂಬಿ ಭಾರತ ಕೊಡವೂರು ನಗರಸಭಾ ಸದಸ್ಯರು ಕೆ ವಿಜಯ ಕೊಡವೂರು ಮಾತನಾಡಿ, ಉಡುಪಿ ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಿಗೆ ಕೆಲವು ಕಡೆ ಅವಘಡ ಆಗಿದ್ದನ್ನು ರಕ್ಷಣೆಯಾಗಿರುವುದಕ್ಕೆ ಮನಗಂಡು ಹಲವಾರು ದಾನಿಗಳ ಮುಖಾಂತರ ಮಕ್ಕಳಿಗೆ ಉತ್ತಮ ಸೌಲಭ್ಯ ನೀಡುವುದರಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ಹೇಳಿದರು. ಭಗವಾನ್ ಶ್ರೀರಾಮಚಂದ್ರನ ಆದರ್ಶ ಗುಣಗಳನ್ನು ಮಕ್ಕಳಿಗೆ ತಿಳಿಸಿದರು. ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ ಮಾರಾಟ ವಿಭಾಗದ ಸೀನಿಯರ್ ಮ್ಯಾನೇಜರ್ ಉದಯ ನಾಯ್ಕ್ ಮಾತನಾಡಿ ಸಂಪೂರ್ಣ ವಿಮಾ ಸೌಲಭ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿ , ನಗರಸಭಾ ಸದಸ್ಯ ವಿಜಯ ಕೊಡವೂರವರ ಆದರ್ಶ ಮಹಾ ನಾಯಕರ ಹಾದಿ ಅಭಿವೃದ್ಧಿ ಕನಸು ನನಸಾಗಲಿ ದೇಶದಲ್ಲಿ ಮಾದರಿಯಾಗಲಿ ಎಂದರು . ಉಡುಪಿ ತಾಲೂಕು ಪಂಚಾಯಿತ್ ಮಾಜಿ ಅಧ್ಯಕ್ಷರು ಆಗಿರುವ ಶ್ರೀಮತಿ ನಳಿನಿ ಪ್ರದೀಪ ರಾವ್ ಒಳ್ಳೆಯ ಕಾರ್ಯಕ್ರಮಗಳ ಬಗ್ಗೆ ವೇದಿಕೆಯಲ್ಲಿ ಕೊಂಡಾಡಿದರು . ವಿಮಾ ದಾನಿಗಳಾಗಿರುವ ಶ್ರೀ ಮಹಾಗಣಪತಿ ಪೈಂಟಿಂಗ್ ಕಾಂಟ್ರಾಕ್ಟರ್ ಶ್ರೀ ಸುರೇಶ್ ಶೇರಿಗಾರ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಆರೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಉದಯ ನಾಯ್ಕ್ , ಶ್ರೀಮತಿ ಚಂದ್ರಾವತಿ ಹೆಬ್ಬಾರ್ , ವಿಷ್ಣುಮೂರ್ತಿ ಯುವಕ ಮಂಡಲದ ಅಧ್ಯಕ್ಷರಾಗಿರುವ ಶ್ರೀ ಗಣಪತಿ ನಾಯ್ಕ್ , ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಚಂದ್ರಶೇಖರ್ ನಾಯ್ಕ್, ಕೊಡವೂರ್ ಅಭಿವೃದ್ಧಿ ಸಮಿತಿಯ ವಿನಯ ನಾಯ್ಕ್ , ಸಂತೋಷ್ , ಶಾಲೆಯ ಎಲ್ಲ ಮಕ್ಕಳು, ಪೋಷಕರು. ಊರಿನವರು ಹಾಗೂ ವಿಷ್ಣುಮೂರ್ತಿ ಯುವಕ ಮಂಡಲದ ಎಲ್ಲ ಸದಸ್ಯರು ಉಪಸ್ಥಿತರಿದ್ದರು ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸಂದೀಪ್ ಹೆಗ್ಡೆ ಎಲ್ಲರನ್ನು ಸ್ವಾಗತಿಸಿ , ಮಹೇಶ್ ಶೇರಿಗಾರ್ ವ೦ದಿಸಿದರು . ಯಾದವ್ ಶೇರಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!