ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ!

ಹುಬ್ಬಳ್ಳಿಯ ಮಹಿಳೆಯೊಬ್ಬರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದು, ವಿಮಾನ ನಿಲ್ದಾಣ ಆಡಳಿತ ಮಂಡಳಿ ಮಗುವಿಗೆ ಸ್ವಾಗತ ಕೋರಿದೆ.

ಟರ್ಮಿನಲ್ ಮೂರರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ವಿಷಯ ತಿಳಿದ ನಿಲ್ದಾಣದ ಆಡಳಿತ ಮಂಡಳಿ ಮಗುವನ್ನು ಪ್ರೀತಿಯಿಂದ ಸ್ವಾಗತಿಸಿ, ಈ ಮಗು ನಮ್ಮ ಅತ್ಯಂತ ಕಿರಿಯ ಪ್ರಯಾಣಿಕ, ಕಿರಿಯ ಪ್ರಯಾಣಿಕರೇ ನಿಮಗೆ ಸ್ವಾಗತ ಎಂದು ಹೇಳಿದ್ದಾರೆ.

ಮಹಿಳೆಗೆ ಟರ್ಮಿನಲ್ ಮೂರರಲ್ಲಿ ಹೊಟ್ಟೆ ನೋವು ಕಾಣಿಸಿದೆ. ವಿಮಾನ ನಿಲ್ದಾಣದ ಮೇದಾಂತ ಕ್ಲಿನಿಕ್‌ನಲ್ಲಿ ಹೆರಿಗೆಯಾಗಿದ್ದು, ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ ಮೊದಲ ಅಳು ಕೇಳಿ ವಿಮಾನ ನಿಲ್ದಾಣವೇ ಖುಷಿ ಪಟ್ಟಿದ್ದು, ಇದೊಂದು ಅಪರೂಪದ ಘಟನೆ ಎಂದು ಸಿಬ್ಬಂದಿ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply