ಮಹಾರಾಷ್ಟ್ರದಲ್ಲಿ ಕರೊನಾ ವೈರಸ್​ ಅಟ್ಟಹಾಸ

ಮುಂಬೈ: ಮಹಾಮಾರಿ ಕರೊನಾ ವೈರಸ್​ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದೆ. ಇದನ್ನು ತಡೆಯಲು ಈಗಾಗಲೇ ಲಾಕ್​ಡೌನ್​ನಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೂ ದೇಶದ ಆರ್ಥಿಕ ಸ್ಥಿತಿಗಾಗಿ ಸಡಿಲಗೊಳಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಲಾಕ್​ಡೌನ್​ ತೆಗೆದಿದ್ದರೆ, ಮಹಾರಾಷ್ಟ್ರ ಆಗಸ್ಟ್​ 31ರವರೆಗೂ ಲಾಕ್​ಡೌನ್​ ವಿಸ್ತರಿಸಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 4 ಲಕ್ಷ ಕರೊನಾ ಪ್ರಕರಣಗಳು ದಾಟಿವೆ. ಹೀಗಾಗಿ ಕರೊನಾಗೆ ಕಡಿವಾಣ ಹಾಕಲು ಲಾಕ್​ಡೌನ್​ ಮುಂದುವರಿಸಿದೆ. ಕಳೆದ ತಿಂಗಳು ಜುಲೈ 31ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿತ್ತು.

ನೋಟಿಫಿಕೇಶನ್​ ಪ್ರಕಾರ ಶಾಪಿಂಗ್​ ಹಾಗೂ ವಾಯುವಿಹಾರ ಸೇರಿದಂತೆ ಅಗತ್ಯವಲ್ಲದ ಚಟುವಟಿಕೆಗಳಿಗೆ ಯಾರು ಸಹ ಮನೆಯಿಂದ ಹೊರ ಬರಬಾರದು ಎಂದು ನಿರ್ಬಂಧಿಸಲಾಗಿದೆ. ಅಲ್ಲದೆ, ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯ.ವೈದ್ಯಕೀಯ ಕಾರಣ ಹಾಗೂ ಉದ್ಯೋಗ ಚಟುವಟಿಕೆಗೆ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ಜನಸಮೂಹ ಸೇರುವುದು ಮತ್ತು ಸಭೆಗಳನ್ನ ಮುಂದಿನ ಆದೇಶದವರೆಗೆ ಸಂಪೂರ್ಣ ಬ್ಯಾನ್​ ಮಾಡಲಾಗಿದೆ. ಇನ್ನು ಮದುವೆ ಸಮಾರಂಭಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಮಾಲ್​ಗಳಲ್ಲಿನ ಆಹಾರ ಮಳಿಗೆ ಮತ್ತು ರೆಸ್ಟೋರೆಂಟ್​ಗಳನ್ನು ತೆರಯಲು ಅನುಮತಿ ನೀಡಲಾಗಿದ್ದು, ಪಾರ್ಸಲ್​ ಮತ್ತು ಡಿಲಿವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.​​

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply