5 ರಫೇಲ್​ ಯುದ್ಧ ವಿಮಾನಗಳು ಅಂಬಾಲ ವಾಯುನೆಲೆಗೆ

ಭಾರತ ಮತ್ತು ಫ್ರಾನ್ಸ್​ ನಡುವಿನ ರಕ್ಷಣಾ ಒಪ್ಪಂದದ ಭಾಗವಾಗಿ ದೇಶದ  ಬಲತುಂಬಲು ಮೊದಲ ಹಂತದಲ್ಲಿ 5 ರಫೇಲ್​ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿದಿವೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ವಾಯುಸೇನೆ​ ರಫೇಲ್​ ವಿಮಾಗಳನ್ನು ಬರಮಾಡಿಕೊಂಡರು.

ಐದು ರಫೇಲ್​ ಯುದ್ಧ ವಿಮಾನಗಳಿಗೆ ಎರಡು ಸುಖೋಯ್​ ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದವು. ಆಗಸ್ಟ್​ 15ರ ಬಳಿಕ ರಫೇಲ್​ ವಾಯುಸೇನೆಗೆ ಅಧಿಕೃತವಾಗಿ ಸೇರಿಕೊಳ್ಳಲಿವೆ. ರಫೇಲ್ ವಿಮಾನವೂ​ ಚೀನಾದ ಜೆ-20 ಯುದ್ಧ ವಿಮಾನಗಳಿಗಿಂತ ಬಲಿಷ್ಠವಾಗಿದೆ.

 
 
 
 
 
 
 
 
 
 
 

Leave a Reply