ಕೊರೊನಾ ವಾರಿಯರ್ ಸ್ವಯಂಸೇವಕರಾಗಿ ಶಾಸಕ ಭಟ್ ಮನವಿ

ಉಡುಪಿ:  ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರಿಂದ ಕೆಲವರು ಸಾವನ್ನಪ್ಪುತ್ತಿದ್ದಾರೆ.  ಅಂಥವರನ್ನು ಪಿ.ಪಿ.ಇ.  ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸಲು ಹಾಗೂ ವೈರಸ್ ಸೋಂಕಿತರನ್ನು ಸಾಗಿಸಲು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ನ ಆವಶ್ಯಕತೆ ಇದೆ.

 

ಈಗಾಗಲೇ ಸಂಘ ಪರಿವಾರದ ಕೆಲವು ಮಂದಿ ಸದಸ್ಯರು ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ (ಸ್ವಯಂ ಸೇವಕರಾಗಿ)ಗಳಾಗಿ ಸೇವೆ ಸಲ್ಲಿಸಲು ಹೆಸರು ನೋಂದಾಯಿಸಿ ಕೊಂಡಿದ್ದಾರೆ.

ಸಾರ್ವಜನಿಕರು ಸ್ವಇಚ್ಛೆಯಿಂದ ಸ್ವಯಂ ಸೇವಕರಾಗಿ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಕಳಾಗಲು ಬಯಸಿದ್ದಲ್ಲಿ ದೂರವಾಣಿ ಸಂಖ್ಯೆ 9448121856ಗೆ ಕರೆ ಮಾಡಿ ನೋಂದಾಯಿಸಿಕೊಳ್ಳುವಂತೆ  ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.

ಕೋವಿಡ್ ಫ್ರಂಟ್ ಲೈನ್ ವಾರಿಯರ್ ಗಳಾಗ ಬಯಸುವವರು ಸದೃಢ ಹಾಗೂ ಆರೋಗ್ಯವಂತರಾಗಿರುವುದರ ಜೊತೆಗೆ ಮನೆಯಲ್ಲಿರುವ ಹಿರಿಯರು ಹಾಗೂ ಚಿಕ್ಕ ಮಕ್ಕಳ ಸಂಪರ್ಕದಿಂದ ದೂರವಿರುವುದು ಉತ್ತಮ ಎಂದು ಭಟ್ ತಿಳಿಸಿದ್ದಾರೆ.

 

ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ನೋಂದಾಯಿಸಿ ಕೊಂಡವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿ.ಎಚ್.ಓ)  ಕಚೇರಿಯಲ್ಲಿ ಪಿ.ಪಿ.ಇ ಕಿಟ್ ಧರಿಸುವ ಬಗ್ಗೆ ಮತ್ತು ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply