ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಮೇಲೆ ಎರಗಿದ ಕಂಬ..

ಪರ್ಕಳ ರಾಷ್ಟ್ರೀಯ ಹೆದ್ದಾರಿ169ಎ ಇಲ್ಲಿನ ಕೆಳಪರ್ಕಳದ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು. ರೈಲ್ವೆ ಹಳಿ ಪಟ್ಟಿಯಂತೆ ಇರುವ ಹಳೆದಾದ ಈ ವಿದ್ಯುತ್ ವಯರ್ ಕಂಬ ಸಮೇತ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಸವಾರನ ಮೇಲೆ ಬಿದ್ದುಜಖಂಗೊಂಡಿದೆ.

ಚಿಂತಾಜನಕ ಸ್ಥಿತಿಯಲ್ಲಿದ್ಧ ವ್ಯಕ್ತಿಆಸ್ಪತ್ರೆ ಸೇರಿದ್ದಾರೆ. ಮಣೆಪಾಲ ಪೊಲೀಸರು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ ತಕ್ಷಣ ಪರ್ಕಳ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಂಬ ಹಾಗೂ ವಯರಗಳನ್ನು ಬೇರ್ಪಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಉಳಿದೆಲ್ಲ ಕಡೆ ಅಗಲ ಗೊಳಿಸಿ ಈ ಭಾಗದಲ್ಲಿ ಮಾತ್ರ ಕಾಮ ಗಾರಿ ನಡೆಸದೆ ಕೈಕಟ್ಟಿ ಕುಳಿತ ಜಿಲ್ಲಾಡಳಿತದ ಅವ್ಯವಸ್ಥೆಯ ಪರಿಣಾಮವಾಗಿ ಇಂತಹ ಅಪಘಾತಗಳು ನಡೆಯುತ್ತಿರುದರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ತಕ್ಷಣ ಈ ರಸ್ತೆಯನ್ನು ಅಗಲೀಕರಣಗೊಳಿಸ ಬೇಕು. ಸಾರ್ವಜನಿಕರ ಆಸ್ತಿಪಾಸ್ತಿಗಳ ನಷ್ಟಕ್ಕೆ ಜಿಲ್ಲಾಡಳಿತ ಹೊಣೆಯಾಗಿದೆ ಎಂದು
ಸ್ಥಳೀಯರು ದೂರಿದ್ದಾರೆ

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply