ಜೂನ್, 30: ವಾಯ್ಸ್ ಆಫ್ ಹೀಲಿಂಗ್

ವೈದ್ಯರಲ್ಲಿರುವ ಗಾಯನ ಪ್ರತಿಭೆಯನ್ನು ಗುರುತಿಸಿ, ವೇದಿಕೆ ಕಲ್ಪಿಸುವ ಆಶಯದಿಂದ ಈ ತಿಂಗಳ 30ರಂದು ವಾಯ್ಸ್ ಆಫ್ ಹೀಲಿಂಗ್ ಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ದಂತ ವೈದ್ಯರ ಸಂಘದ ಪೂರ್ವಾಧ್ಯಕ್ಷ ಡಾ. ವಿಜೇಂದ್ರ ವಸಂತ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘ (ಐಎಂಎ), ಆಯುಷ್ ಮತ್ತು ಭಾರತೀಯ ದಂತ ವೈದ್ಯರ ಸಂಘ (ಐಡಿಎ) ಸಂಯುಕ್ತಾಶ್ರಯದಲ್ಲಿ ಮೆಲೊಡಿ ಸಂಸ್ಥೆ ಸಹಯೋಗ ದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯ್ದ 15 ಮಂದಿಯಿಂದ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.
ಈ ತಿಂಗಳ 24ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು. ಮಣಿಪಾಲ ಕೆಎಂಸಿ ಮತ್ತು ಪ್ರಸಾದ್ ನೇತ್ರಾಲಯದ ವೈದ್ಯರೂ ಸೇರಿದಂತೆ ಸುಮಾರು 250 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಡಾ. ವಿಜಯೇಂದ್ರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಐಎಂಎ ಅಧ್ಯಕ್ಷೆ ಡಾ. ರಾಜಲಕ್ಷ್ಮಿ ಮತ್ತು ಕಾರ್ಯದರ್ಶಿ ಅರ್ಚನ ಭಕ್ತ, ಐಡಿಎ ಅಧ್ಯಕ್ಷ ಡಾ. ಜಗದೀಶ ಜೋಗಿ ಮತ್ತು ಕಾರ್ಯದರ್ಶಿ  ಡಾ. ಮನೋಜ್ ಬ್ರಹ್ಮಾವರ ಹಾಗೂ ಆಯುಷ್ ಅಧ್ಯಕ್ಷ ಡಾ. ಎನ್.ಟಿ. ಅಂಚನ್ ಪಡುಬಿದ್ರಿ ಮತ್ತು ಕಾರ್ಯದರ್ಶಿ  ಡಾ. ಸತೀಶ ರಾವ್ ಇದ್ದರು
 
 
 
 
 
 
 
 
 
 
 

Leave a Reply