ಆದರ್ಶ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ

ಇತ್ತೀಚಿನ ದಿನಗಳಲ್ಲಿ ತಂದೆ&ತಾಯಿ ಇಬ್ಬರೂ ಉದ್ಯೋಗದಲ್ಲಿರುವುದರಿಂದ ಮಕ್ಕಳಲ್ಲಿ ಬಾಂಧವ್ಯದ ಕೊರತೆ ಕಾಡುತ್ತಿದೆ. ಹೀಗಾಗಿ ಹೆತ್ತವರು ಮಕ್ಕಳಿಗೆ ಸಮಯ ಮೀಸಲಿಡಬೇಕು. ಮನೆಯಲ್ಲಿ ಹಿರಿಯರೊಂದಿಗೆ ಬೆರೆಯುವಂತೆ ಮಾಡಬೇಕು. ಸಂಸ್ಕಾರ ಕಲಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಶನಿವಾರ ಆದರ್ಶ ಆಸ್ಪತ್ರೆ ಹಾಗೂ ವಿಜಯವಾಣಿ ಪತ್ರಿಕೆ ಸಹಯೋಗದೊಂದಿಗೆ ಆದರ್ಶ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ನ್ಯೂಟ್ರಿಷನ್ ಕೌನ್ಸಲಿಂಗ್,  ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆದರ್ಶ ಆಸ್ಪತ್ರೆ  ಆಡಳಿತ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಮಾತನಾಡಿ, ಇತ್ತೀಚೆಗೆ 5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ದೇಹ ಉಂಟಾಗುತ್ತಿದೆ. ಇದಕ್ಕೆ ಅತಿಯಾಗಿ ಜಂಕ್ ಫುಡ್ ಗಳ ಸೇವನೆ ಹಾಗೂ ಟಿವಿ&ಮೊಬೈಲ್ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿರುವುದು ಕಾರಣವಾಗುತ್ತಿದೆ ಎಂದರು.

ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಮಾತನಾಡಿ, ಮಕ್ಕಳ ಕೆಲಸದಲ್ಲಿ ತಾಯಿಯಾದವಳು ನಿರಾಸಕ್ತಿ ತಾಳಬಾರದು. ತಾಯಂದಿರಿಗೆ ತಾಳ್ಮೆ ಇರಬೇಕು. ಮಕ್ಕಳ ನಡವಳಿಕೆ ಬಗ್ಗೆ ಗಮನವಿಡಬೇಕು.  ತಂದೆ&ತಾಯಿ ಹೇಗೆ ವರ್ತಿಸುತ್ತಾರೋ ಅದನ್ನೇ ಅನುಸರಿಸುತ್ತಾರೆ. ಹೀಗಾಗಿ ಪ್ರೀತಿಯಿಂದ ಮಕ್ಕಳ ಹೃದಯ ಗೆಲ್ಲಬೇಕು ಎಂದು ಸಲಹೆ ನೀಡಿದರು. ಮಕ್ಕಳ ತಜ್ಞ ಡಾ. ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಗಮನ ಸೆಳೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ: ಮಕ್ಕಳ ದಿನಾಚರಣೆ ನಿಮಿತ್ತ 1ರಿಂದ 5 ವರ್ಷದೊಳಗಿನ ಮಕ್ಕಳಿಗೆ ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಚಿಣ್ಣರು ವಿವಿಧ ವೇಷ&ಭೂಷಣ ತೊಟ್ಟು ತಮ್ಮಲ್ಲಿರುವ ಪ್ರತಿಭೆ ತೋರ್ಪಡಿಸಿದರು. ಸ್ಪರ್ಧೆಯಲ್ಲಿ ಆಕರ್ಷ್ ಪ್ರಥಮ, ಮಾನವ್ ಶೆಟ್ಟಿ ದ್ವೀತಿಯ, ಷಡಾನನ ಆಚಾರ್ಯ ಹಾಗೂ ವೇದಾಂಶ್ ಕೃಷ್ಣ ತೃತೀಯ ಸ್ಥಾನ ಗಳಿಸಿದರು. ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಡಾ.ಮೋಹನದಾಸ್ ಶೆಟ್ಟಿ ಹಾಗೂ ರಂಜಿತಾ ನಾಯಕ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು.  ಡಯಟಿಷಿಯನ್ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಸಹಪ್ರಬಂಧಕ ಪ್ರಕಾಶ ಡಿ.ಕೆ. ವಂದಿಸಿದರು.

 
 
 
 
 
 
 
 
 
 
 

Leave a Reply