ತೀವ್ರ ಹದಗೆಟ್ಟಿದೆ ದಿಗ್ಗಜ ಗಾಯಕ ಎಸ್ಪಿಬಿ ಆರೋಗ್ಯ

ಚೆನ್ನೈ: ಸ್ವರ ಮಾಂತ್ರಿಕ ಹಾಗೂ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತೆ ಬಿಗಡಾಯಿಸಿದೆ.

ಎಸ್ಪಿಬಿ ಅವರಿಗೆ ಆಗಸ್ಟ್ 5ರಂದು ಕರೊನಾ ಸೋಂಕು ದೃಢವಾಗಿತ್ತು. ಅದೇ ದಿನ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಎಸ್ಪಿಬಿ ಗುಣಮುಖರಾಗಿ ಬರಲೆಂದು ಚಿತ್ರರಂಗ ಸೇರಿದಂತೆ ಅನೇಕರು ಪ್ರಾರ್ಥಿ ಸಿದ್ದರು. ಹೀಗಿರುವಾಗ ಆಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಅಲ್ಲದೆ, ಕರೊನಾ ನಗೆಟಿವ್ ಸಹ ಆಗಿತ್ತು. ಈ ಬಗ್ಗೆ ಎಸ್ಪಿಬಿ ಮಗ ಎಸ್.ಪಿ. ಚರಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು

ಇನ್ನೇನು ಬಿಡುಗಡೆಯಾಗುವ ಹಂತದಲ್ಲಿ ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈಗಲೂ ಅವರ ಆರೋಗ್ಯ ಸ್ಥಿತಿ ಚಿಂತಾ ಜನವಾಗಿದೆ ಎಂದಿದ್ದಾರೆ. ಹೀಗಾಗಿ ಕುಟುಂಬ ಮತ್ತು ಅಭಿಮಾನಿಗಳಲ್ಲಿ ಮತ್ತೆ ಆತಂಕ ಆವರಿಸಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply