04.12.2023 ರಂದು ಉಡುಪಿ ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ  ಸಂಸ್ಕೃತೋತ್ಸವ:

​04.12.2023 ರಂದು ಉಡುಪಿ ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ  ಸಂಸ್ಕೃತೋತ್ಸವ : ನಡೆಯಲಿದ್ದು ಅದರ ಅಂಗವಾಗಿ ಪ್ರೌಢಶಾಲಾವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ ರಾಜಾ೦ಗಣದಲ್ಲಿ ಪರ್ಯಾಯ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ  ಸಂಸ್ಕೃತ  ವಿಶ್ವವಿದ್ಯಾಲಯದ ಪರೀಕ್ಷಾಂಗ ನಿರ್ದೇಶಕರಾದ ಡಾ. ರಾಮಕೃಷ್ಣಭಟ್ ಅವರು, ಮೂಡುಬಿದ್ರೆಯಲ್ಲಿ  ಸಂಸ್ಕೃತೋಪನ್ಯಾಸಕರಾದ ವಿದ್ವಾನ್ ಶ್ರೀನಿಧಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ  ಸಂಸ್ಕೃತ  ಪದ್ಯಗಾನ ಹಾಗೂ ಜಯವೈಜಯಂತೀ ಎಂಬ  ಸಂಸ್ಕೃತ ನಾಟಕವು ಅಭಿನಯಿಸಲ್ಪಡುತ್ತದೆ.
ವಾರ್ಷಿಕೋತ್ಸವ : ದಿ. 05.12.2023ರಂದು ಎಸ್.ಎಮ್.ಎಸ್.ಪಿ  ಸಂಸ್ಕೃತ  ಕಾಲೇಜಿನ 119ನೆಯ ವಾರ್ಷಿಕೋತ್ಸವ ನಡೆಯಲಿದ್ದು ಸಂಜೆ ರಾಜಾಂಗಣದಲ್ಲಿ ಪರ್ಯಾಯಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಹಲ್ಯಾಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಸ್ಕೃತ  ಕಾಲೇಜಿನ ಪ್ರಾಕ್ತನವಿದ್ಯಾರ್ಥಿಗಳಾದ ವಿದ್ವಾನ್ ನರಹರಿ ಕೇಶವಭಟ್ ಮತ್ತು ವಿದುಷೀ ಶ್ರೀಮತಿ ಕಮಲಾಕ್ಷಿ ಅವರು ಶುಭಾಶಂಸನೆ ಗೈಯಲಿದ್ದಾರೆ. ಅನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಮಹಾವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿವೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply