ರಂಗಭೂಮಿಯ ಮೂಲಕ ಅಂತರಂಗದ ಅನಾವರಣ `ರೋಹಿತ್.ಎಸ್.ಬೈಕಾಡಿ

“ರಂಗಭೂಮಿಯಲ್ಲಿ ‘ನಾನು’ ಎಂಬುದನ್ನು ಬಿಟ್ಟು ಮಗುವಿನ ಮುಗ್ಧತೆ ಮತ್ತು ಸಹಜತೆಯೊಂದಿಗೆ ತೊಡಗಿಕೊಂಡಾಗಲೆ ನಿಜವಾದ ಸೃಜನಾತ್ಮಕತೆ ಅರಳುತ್ತದೆ. ರಂಗಾಭಿವ್ಯಕ್ತಿ ಸಾರ್ಥಕವಾಗುವುದು ಹೊರಗಿನ ಆಡಂಬರದ, ತೋರಿಕೆಯ ಚಹರೆಗಳಿಂದಲ್ಲ; ಬದಲಾಗಿ ನಟನಟಿಯರು ತಮ್ಮೊಳಗನ್ನು ತಾವೇ ನೋಡಿಕೊಂಡು ಪರಿವರ್ತಿತರಾಗುವ ಮೂಲಕ” ಎಂದು ಭರವಸೆಯ ರಂಗನಿರ್ದೇಶಕ ಶ್ರೀ ರೋಹಿತ್.ಎಸ್.ಬೈಕಾಡಿ ನುಡಿದರು.

ಅವರು ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ತೃತೀಯ ಸೆಮೆಸ್ಟರ್ ವಿದ್ಯಾರ್ಥಿ- ಶಿಕ್ಷಕರಿಗಾಗಿ ಒಂದು ದಿನದ ರಂಗತರಬೇತಿ ಕಾರ್ಯಾಗಾರವನ್ನು ನಡೆಸಿಕೊಡುತ್ತ ಈ ಮಾತುಗಳನ್ನು ಆಡಿದರು. ಧ್ವನಿ, ಚಲನೆ, ಅಭಿನಯಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಅವರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳು ನಿಜ ಜೀವನದ ಪ್ರಸಂಗಗಳನ್ನು ಆಯ್ದುಕೊಂಡು ಕಿರುರೂಪಕಗಳನ್ನು ಆಡಿತೋರಿಸಿ ಚರ್ಚಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸ್ವಾಗತಿಸಿ ಕಾರ್ಯಾಗಾರದ ಉದ್ದೇಶವನ್ನು ನಿರೂಪಿಸಿದರು. ದೀಕ್ಷಾ ಚಂದ್ರಶೇಖರ ಶೆಟ್ಟಿ ಮತ್ತು ಗೌತಮ್ ಕಾರ್ಯಾಗಾರದ ಬಗೆಗಿನ ಅನ್ನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀ ಲತಾ ಆಚಾರ್ಯ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply