ಶ್ರೀ ಸುಗುಣ ಸ್ಕೂಲ್ ಗೆ ಶುಭ ಚಾಲನೆ

ಪೂಜ್ಯ ಪುತ್ತಿಗೆ ಶ್ರೀಪಾದರು ಕಳೆದ ಹತ್ತು ವರ್ಷಗಳಿಂದ ಪಾಡಿಗಾರ್ ನ ತಮ್ಮ ಮಠದಲ್ಲಿ ಲೌಕಿಕ ವೈದಿಕ ಶಿಕ್ಷಣವನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿ ಗಳನ್ನು ತರಬೇತಿ ಗೊಳಿಸಿ ಸಮಾಜಕ್ಕೆ ನೀಡುತ್ತಿದ್ದಾರೆ.

ಈ ಅನುಭವದ ಪರಿಷ್ಕೃತ ರೂಪವಾಗಿ ಅದಕ್ಕಾಗಿಯೇ ನಿರ್ಮಿಸಿದ ಭವ್ಯ ಕಟ್ಟಡದಲ್ಲಿ ಈ ವರ್ಷದಿಂದಲೇ LKG ಯಿಂದ SSLC ಯವರೆಗಿನ ಶಿಕ್ಷಣ ವನ್ನು ನೀಡಲು ಪೂಜ್ಯ ಶ್ರೀಪಾದರು ಸಂಕಲ್ಪಿಸಿದ್ದಾರೆ .

ತತ್ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಇಂದು ಪೂಜ್ಯ ಶ್ರೀಪಾದರು ಶ್ರೀ ವೇದವ್ಯಾಸ ದೇವರ ಪೂಜೆ ನೆರವೇರಿಸಿ ಸರ್ವಜ್ಞ ಪೀಠದಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸ ವನ್ನು ಮಾಡಿಸಿದರು.

ಈ ಅಪೂರ್ವವಾದ ಸುಯೋಗವನ್ನು ಹೊಂದಿದ ಮಕ್ಕಳ ಪೋಷಕರು ಧನ್ಯತೆಯ ಭಾವವನ್ನು ಹೋದಿಂದ್ದು ಕಂಡು ಬಂತು.

ಪೂಜ್ಯ ಶ್ರೀಪಾದರು ಮಕ್ಕಳ ಕೈಯಿಂದಲೇ ಶ್ರೀ ಕೃಷ್ಣಾಯ ನಮಃ ಎಂದು ಶ್ರೀ ಗಣೇಶಾಯ ನಮಃ ಬರೆಯಿಸುವ ಮೂಲಕ ಮತ್ತು ಶಾಂತಿಮಂತ್ರವನ್ನು ಮಕ್ಕಳಿಗೆ ಭೋದಿಸುವ ಮೂಲಕ ಸುಗುಣ ಪಾಠ ಶಾಲೆಗೆ ವಿದ್ಯುಕ್ತ ಚಾಲನೆ ನೀಡಿದರು.

ಬಹು ಬೇಡಿಕೆಯಿರುವ ಈ ಸ್ಕೂಲಿನ ವಿಪ್ರ ಬಾಂಧವರು ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರ್ಯದರ್ಶಿ ಪ್ರಮೋದ್ ಸಾಗರ್ ರವರನ್ನು (+91 9986030899) ಸಂಪರ್ಕಿಸಬಹುದಾಗಿದೆ.

 
 
 
 
 
 
 
 
 
 
 

Leave a Reply