ರಾಘು ನಾಯ್ಕ್ ರವರಿಗೆ ಜೆಸಿಐ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ

ಜೆಸಿಐ ಇಂಡಿಯಾ, ಜೆಸಿಐ ಉಡುಪಿ ಸಿಟಿ ಯು 23, 2024 ರಂದು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ವನ್ನು ಉಡುಪಿ ಮೂಡು ಸಗ್ರಿ ವಾರ್ಡ್ ಮನ್ನೊಳಿಗುಜ್ಜಿಯ ರಾಘು ನಾಯ್ಕ್ ರವರಿಗೆ ನೀಡಿ ಗೌರವಿಸಲಾಗಿದೆ. ಸುಮಾರು ಇಪ್ಪತ್ತು ವರ್ಷಗಳಿಂದ ಉಡುಪಿಯ ಪರಿಸರದಲ್ಲಿ ತೆಂಗಿನ ಮರ ಹತ್ತಿ ಕಾಯಿಯನ್ನು ತೆಗೆಯುವ ಕೆಲಸದಲ್ಲಿ ತೊಡಗಿದ್ದು ಜೀವನ ಸಾಗಿಸುತಿದ್ದರು.  ಇವರು ತಂದೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಮಾಡುತ್ತಿರುತ್ತಾರೆ. ಉಡುಪಿ ಅಲೆವೂರು ಶಾಂತಿನಿಕೇತನ ಸ್ಕೂಲ್ ವೇದಿಕೆಯಲ್ಲಿ ನಡೆದ ಜೆಸಿಐ ರಾಷ್ಟ್ರೀಯ ತರಬೇತಿ ದಿನಾಚರಣೆಯ ಪ್ರಯುಕ್ತ ಇವರನ್ನು ಗುರುತಿಸಿ ಗೌರವಿಸಿದೆ. 

ದೇಶದ ಶ್ರಮ ಜೀವಿ ಕಟ್ಟ ಕಡೆಯ ವ್ಯೆಕ್ತಿ ಯನ್ನು ಗುರುತಿಸಿ ಗೌರವಿಸುವ ಉದ್ದೇಶ ಜೆಸಿಐ ಇಂಡಿಯಾ ಗುರುತಿಸುತ್ತದೆ ಎನ್ನುವ ಧೇಯ ಹೊಂದಿ ಗೌರವಿಸುತ್ತದೆ. ಈ ಸಂದರ್ಭದಲ್ಲಿ ಉಡುಪಿ ಜೆಸಿಐ ಸಿಟಿ ಯ ಅಧ್ಯಕ್ಷೆ ಜೆಸಿ ಡಾ. ಹರೀಣಾಕ್ಷಿ ಕರ್ಕೇರ, ಮುಖ್ಯ ಅತಿಥಿಯಾಗಿ ಜೆಸಿಐ ಉಡುಪಿ ಸಿಟಿ ಯ ಪೂರ್ವ ಅಧ್ಯಕ್ಷರು ಪೂರ್ವ ವಲಯ ಅಧಿಕಾರಿ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನ ಸೀನಿಯರ್ ಮ್ಯಾನೇಜರ್- ಸೇಲ್ಸ್, ಉಡುಪಿ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ದ ಉಪಾಧ್ಯಕ್ಷರು, ಜೆಸಿ ಉದಯ ನಾಯ್ಕ್, IPP ಜೆಸಿ ಕಿರಣ್ ಭಟ್, ಜೆಸಿ ಸ್ಮಿತಾ ಪಾಟೀಲ್ ಸಂಪನ್ಮೂಲ ವ್ಯೆಕ್ತಿ ಜೆಸಿ ಡಾ. ಗುರುಮೂರ್ತಿ ಎಸ್ ಸಿ, ಶಾಂತಿನಿಕೇತನ ಸ್ಕೂಲ್ ಪ್ರಿನ್ಸಿಪಾಲ್ ಶ್ರೀಮತಿ ರೂಪ ಕಿಣಿ, ಜೆಸಿ ಅವಿನಾಶ್, ಜೆಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply