ಕನ್ನಡ ಶಾಲೆ ಉಳಿದರೆ ಕನ್ನಡ ಉಳಿಯಲು ಸಾಧ್ಯ~ ಡಾ. ಮಹೇಶ್ ಜೋಶಿ.

ಕನ್ನಡ ಶಾಲೆ ಉಳಿದರೆ ಕನ್ನಡ ಉಳಿಯಲು ಸಾಧ್ಯ~ ಡಾ. ಮಹೇಶ್ ಜೋಶಿ.

ಮಾತನಾಡುವಂತೆ ನಡೆಯುವ ಮತ್ತು ಕೆಲಸ ಮಾಡುವ ಜನ ಇದ್ದರೆ ಅದು ಕರಾವಳಿ ಜನರು ಮಾತ್ರ.ಕರಾವಳಿ ಯ ಜನ ಕರ್ಮ ಜೀವಿಗಳು, ಎಂದು ಉಡುಪಿ ಜಿಲ್ಲಾ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹೇಳಿದರು. ನ್ಯಾಯಾಲಯದಲ್ಲಿ ತೀರ್ಪುಗಳು ಕನ್ನಡದಲ್ಲಿಯೇ ಇರಬೇಕು ಎಂದು ಕೋಟ ವಿವೇಕ ವಿದ್ಯಾಲಯದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹದಿನಾರನೇಯ ಕನ್ನಡ ಸಾಹಿತ್ಯ ಸಮ್ಮೇಳನ ಅನುಸಂಧಾನ ಉದ್ಘಾಟಿಸಿ ಅವರು ಮಾತ ನಾಡಿದರು.

ಉಡುಪಿಯಲ್ಲಿ ಶೀಘ್ರ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡ ಲಾಗುವುದು ಎಂದರು. ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಪುಸ್ತಕ ಮಳಿಗೆಗೆ ಚಾಲನೆ ನೀಡಿದರು. ಸಮ್ಮೇಳನಾದ್ಯಕ್ಷತೆ ವಹಿಸಿದ್ದ ಹೊರನಾಡ ಕನ್ನಡಿಗ ಹಾಗೂ ವಿದ್ವಾಂಸ ಸಂಶೋಧಕ ಬಾಬು ಶಿವ ಪೂಜಾರಿ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಕ.ಸಾ.ಪದ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಕ.ಸಾ.ಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಆಡಿದರು. ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೋಟ ಪಿಯು ಪ್ರಾಂಶುಪಾಲ ಜಗದೀಶ ನಾವುಡ ಇದ್ದರು. ಸಾಹಿತಿ ಗೋಪಾಲ ತ್ರಾಸಿ ಸಮ್ಮೇಳನದ ಅಧ್ಯಕ್ಷರ ಪರಿಚಯ ನೀಡಿದರು. ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು.

ಸಂಘಟನಾ ಕಾರ್ಯದರ್ಶಿ ಸತೀಶ ವಡ್ಡರ್ಸೆ ವಂದಿಸಿದರು. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply