ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮಾತೃ ಭಾಷೆ ತುಳು ಎಂದು ನಮೂದಿಸಿ – ಜಯಕರ್ ಶೆಟ್ಟಿ ಇಂದ್ರಾಳಿ

ಉಸಿರು ನಿಂತರೂ ಹೆಸರು ಉಳಿಸಿಸುವ ಕಾರ್ಯಕ್ರಮವನ್ನು ನಿರಂತರ ತುಳುಕೂಟ ಮಾಡುತ್ತಿದೆ. ಒಳ್ಳೆ ಕೆಲಸ ಮಾಡಿದವರ ಹೆಸರು ಅಜರಾಮರವಾಗಿರ ಬೇಕು. ಶಾಲೆಗೆ ಸೇರಿಸುವಾಗ ಮಾತೃ ಭಾಷೆ ತುಳು ಎಂದು ನಮೂದಿಸಿ.

ಹತ್ತು ವರ್ಷದ ಬಳಿಕ ತುಳು ಕೋಟಾದಲ್ಲಿ ಸೀಟು ಸಿಗುವುದು ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷೀಯ ನೆಲೆಯಲ್ಲಿ ಹೇಳಿದರು.

ಭಾವಗೀತೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ತಂತಜ್ಞಾನದೊಂದಿಗೆ ನಮ್ಮತನವನ್ನು ಬಿಟ್ಟುಕೊಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆಯ ನಿರ್ದೇಶಕಿ  ಪೂರ್ಣಿಮಾ ಅಭಿಪ್ರಾಯಪಟ್ಟರು.

ಸುಗಮ ಸಂಗೀತ ಕಲಾವಿದ ಬಿ. ಕೆ. ಕಾರಂತ್ ಜ್ಯೋತಿ ಬೆಳಗಿಸಿ ಭಾವಗೀತೆ ಹಾಡುವ ಮೂಲಕ ಚಾಲನೆ ನೀಡಿದರು.

ಬಾಲಪ್ರತಿಭೆ ರೀತುಶ್ರೀ ಯವರನ್ನು ಅಭಿನಂದಿಸಲಾಯಿತು.

ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಮನೋರಮಾ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕ ಜಯರಾಂ ಸ್ವಾಗತಿಸಿ, ಪ್ರಸ್ತಾವಿಸಿದರು.

ವಿದ್ಯಾ ಸರಸ್ವತಿ ನಿರೂಪಿಸಿದರು.
ಪ್ರಭಾಕರ್ ಭಂಡಾರಿ ವಂದಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply