ಸಿ ಜಿ ಕೆ ರಂಗಪುರಸ್ಕಾರ ಮತ್ತು ನಾಟಕ

ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024  ಜೂನ್27 ಗುರುವಾರ ಸಂಜೆ 6.00 ಗಂಟೆಗೆ ಸರಿಯಾಗಿ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಐ ವೈ ಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ. 
ರಂಗಕರ್ಮಿಗಳಾದ ಉಡುಪಿಯ ರವಿರಾಜ್ ಎಚ್.ಪಿ  ಹಾಗೂ ಮಂಗಳೂರಿನ ಶಶಿರಾಜ್ ರಾವ್ ಕಾವೂರು ಅವರನ್ನು ಸಿ ಜಿ ಕೆ ರಂಗ ಪುರಸ್ಕಾರ 2024 ನೀಡಿ ಗೌರವಿಸಲಾಗುವುದು.
 ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ತುಳುಕೂಟ ಉಡುಪಿಯ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಯವರು ವಹಿಸಲಿದ್ದು, ನಾಡಿನ ಹಿರಿಯ ವಿದ್ವಾಂಸ ನಾಡೋಜ ಡಾ. ಕೆ.ಪಿ. ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೆೈ, ಚಲನಚಿತ್ರ ನಟ ಮೈಮ್ ರಾಮದಾಸ್ ಉಪಸ್ಥಿತರಿರುತ್ತಾರೆ.
ಸಭಾ ಕಾರ್ಯಕ್ರಮದ ನಂತರ ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರಿಂದ ಗುರುರಾಜ್ ಮಾರ್ಪಳ್ಳಿ ರಚನೆ ಮತ್ತು ನಿರ್ದೇಶನದ 125ನೇ ಪ್ರದರ್ಶನ ‘ಅವ್ವ ನನ್ನವ್ವ’ ನಾಟಕವು ಪ್ರದರ್ಶನ ಗೊಳ್ಳಲಿದೆ ಎಂದು ನಮತುಳುವೆರ್  ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 
 
 
 
 
 
 
 
 
 
 
 

Leave a Reply