ವೈಬಿಪಿ : ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆ ಸಂಗೀತ ಸಂಭ್ರಮ 2024

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತು(ರಿ), ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆ ಸಂಗೀತ ಸಂಭ್ರಮ 2024ನ್ನು ಭೀಮ ಗೋಲ್ಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಬ್ರಾಹ್ಮಿ ಸಭಾ ಭವನದಲ್ಲಿ ಆಯೋಜಿಸಿತ್ತು. ಶಾಂತ ಎಲೆಕ್ಟ್ರಿಕಲ್ ಪ್ರೈವೇಟ್ ಲಿಮಿಟೆಡ್ ನ ಎಂ ಡಿ ಶ್ರೀ ಉಚ್ಚಿಲ ಶ್ರೀಪತಿ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಗೀತ ಸಂಭ್ರಮದ ರೂವಾರಿ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಸ್ಪರ್ಧೆಯ ನೀತಿ ನಿಯಮಗಳನ್ನು ಸ್ಪರ್ಧಾಳುಗಳಿಗೆ ವಿವರಿಸಿದರು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕರ್ನಾಟಕ ಕಲಾಶ್ರೀ, ಸಂಗೀತ ಗುರು, ಉಡುಪಿಯ ಹೆಸರಾಂತ ಸಂಗೀತ ದಿಗ್ಗಜರಾದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ವಿದುಷಿ ವಾರಿಜಾಕ್ಷಿ ಭಟ್, ವಿದ್ವಾನ್ ರಾಘವೇಂದ್ರ ಆಚಾರ್ಯ, ವಿದುಷಿ ಲಲಿತ ಕಲ್ಕೂರ್, ವಿದ್ವಾನ್ ಶ್ರೀಧರ ಆಚಾರ್ಯ ಹಾಗೂ ವಿದ್ವಾನ್ ನಟರಾಜ ರವರು ಸಹಕರಿಸಿದ್ದರು. ಉದ್ಘಾಟನಾ ಸಮಾರಂಭದ ಅತಿಥಿಗಳನ್ನು ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ ಅಧ್ಯಕ್ಷ ಚಂದ್ರಕಾಂತ್ ಕೆ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ವಂದಿಸಿ ಶ್ರೀಮತಿ ದಿವ್ಯ ಪಾಡಿಗಾರು ಕಾರ್ಯಕ್ರಮ ನಿರೂಪಿಸಿದರು.

ಸಂಗೀತ ಸ್ಪರ್ಧೆಯು ನಾಲ್ಕು ವಿಭಾಗಗಳಲ್ಲಿ 5 ರಿಂದ 10, 10 ರಿಂದ 15, 15 ರಿಂದ 18 ಮತ್ತು 18 ರಿಂದ ಮೇಲ್ಪಟ್ಟ ವಯೋಮಾನದ ವಿಪ್ರ ಬಂಧುಗಳಿಗಾಗಿ ಏಕಕಾಲದಲ್ಲಿ ಪ್ರತ್ಯೇಕವಾಗಿ ನಡೆದು ಒಟ್ಟಿಗೆ ಸುಮಾರು 146 ಸ್ಪರ್ಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು. ಸ್ಪರ್ಧೆಯ ಫಲಿತಾಂಶ ಹೀಗಿದೆ. 

5 ರಿಂದ 10 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ-ಶ್ರೀ ಪಾಲ ಭಟ್, ಗುಂಡಿಬೈಲ್, ದ್ವಿತೀಯ-ಪ್ರಣತಿ ನಾವಡ, ತ್ರಾಸಿ, ತೃತೀಯ-ಸಾಂಘವಿ ಹಿಳ್ಳೆಮನೆ, ಮಣಿಪಾಲ, ಸಮಾಧಾನಕರ ಬಹುಮಾನ-ಸಾನ್ವಿ ಭಟ್, ಅಂಬಲಪಾಡಿ ಮತ್ತು ಕೃತಿ ಭಟ್, ಕನ್ನರ್ಪಾಡಿ.

ಹತ್ತರಿಂದ ಹದಿನೈದು ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ-ಪರ್ಜನ್ಯ ಕೆ ರಾವ್, ಕಡಿಯಾಳಿ, ದ್ವಿತೀಯ-ಪ್ರಾರ್ಥನಾ, ಬೈಲೂರು, ತೃತೀಯ-ಸ್ವಸ್ತಿ ಎಂ ಭಟ್, ಪರ್ಕಳ, ಸಮಾಧಾನಕರ ಬಹುಮಾನ-ಪ್ರಣವ್ ಅಡಿಗ, ಅಂಬಲಪಾಡಿ,

15 ರಿಂದ 18 ವರ್ಷದ ಸ್ಪರ್ಧೆಯಲ್ಲಿ ಪ್ರಥಮ-ಭಾರ್ಗವಿ ಎಚ್ ಕೆ, ಬೈಲೂರು, ದ್ವಿತೀಯ-ಸುಮದ್ವ ತಂತ್ರಿ, ಮುಚ್ಚಿಲ್ಕೋಡು, ತೃತೀಯ-ಪ್ರಾರ್ಥನಾ, ಪರ್ಕಳ, ಸಮಾಧಾನಕರ ಬಹುಮಾನ-ಅಮೃತ ಜಿ, ಅಲೆವೂರು,

18ರ ಮೇಲಿನ ವಯೋಮಾನದವರ ಸ್ಪರ್ಧೆಯಲ್ಲಿ ಪ್ರಥಮ-ಪ್ರಸನ್ನ ರಾಮಕೃಷ್ಣ ಭಟ್, ಉಡುಪಿ, ದ್ವಿತೀಯ-ಸುಮೇಧಾ, ಕುಕ್ಕಿ ಕಟ್ಟೆ, ತೃತೀಯ-ಚಿತ್ಕಲಾ ಎಚ್, ಪರ್ಕಳ, ಸಮಾಧಾನಕರ ಬಹುಮಾನ – ಡಾ| ಸುಪ್ರಭಾ, ಬೈಲೂರು ಮತ್ತು ದಿವ್ಯಾ ಎನ್. ಭಟ್, ಮಾರಣಕಟ್ಟೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ ಕ್ರಮವಾಗಿ 5000 ರೂ.3,000 ರೂ. 2000 ಹಾಗೂ 1000 ರೂಪಾಯಿಯ ನಗದು ಹಾಗೂ ಬಹುಮಾನದ ಜೊತೆ ಸ್ಮರಣಿಕೆ “ಅಭಿನಂದನಾ ಪತ್ರವನ್ನು ನೀಡಲಾಯಿತು.

ಮಧ್ಯಾಹ್ನ ಸಮಾರೋಪ ಹಾಗೂ ಈ ಬಹುಮಾನ ವಿತರಣೆಯ ಸಮಾರಂಭದ ಸಭಾಧ್ಯಕ್ಷರಾಗಿ ವಿಜಯ ಗ್ರೂಪ್ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಜಯ ರಾಘವ ರಾವ್ ರವರು ಮಾತನಾಡುತ್ತಾ ” ಪರಿಷತ್ತು ವಿಪ್ರರಿಗಾಗಿ ಇಂತಹ ಭಕ್ತಿ ಸಂಗೀತ ಹಾಗೂ ಇತರ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದಲ್ಲೂ ಹಮ್ಮಿಕೊಳ್ಳುವಂತಾಗಲಿ” ಎಂದು ಹಾರೈಸಿದರು. ಚಿನ್ನಾಭರಣಗಳ ಹೆಸರಾಂತ ಮಳಿಗೆ ಭೀಮ ಜುವೆಲ್ಲರ್ಸ್ ನ ಎಂ.ಡಿ. ವಿಷ್ಣು ಶರಣ್ ಭಟ್ ರ ಪರವಾಗಿ ವಲಯ ವಕ್ತಾರ ಕಾರ್ತಿಕ್ ರಾವ್ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು. ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆಯಾಗಿ ಸಂಸ್ಥೆಯ ಉತ್ತಮ ಆಕರ್ಷಕ ಕೈ ಚೀಲಗಳನ್ನು ನೀಡಿದರು. ಈ ಸಂದರ್ಭದಲ್ಲಿ ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ಕಲಾಶ್ರೀ, ಸಂಗೀತ ಗುರು ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ರವರು ಮಾತನಾಡುತ್ತಾ ” *ಸಂಗೀತ ಎನ್ನುವುದು ಸಂಸ್ಕಾರ ಸಂಸ್ಕೃತಿ ಸಂತೋಷ ಆರೋಗ್ಯ ಹಾಗೂ ನೆಮ್ಮದಿಯನ್ನು ನೀಡುವ ಸಾಧನವಾಗಿದೆ* . *ಯುವ ಪೀಳಿಗೆ ಹೆಚ್ಚು ಹೆಚ್ಚು ಇದನ್ನ ಬಳಸಿಕೊಳ್ಳಬೇಕು* ಎಂದು ಮಕ್ಕಳಿಗೆ ಕಿವಿಮಾತು ನುಡಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಹಾಗೂ ನಿಟ್ಟೂರು ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಭಟ್, ಅಂಬಾಗಿಲು ಇವರನ್ನು ಸನ್ಮಾನಿಸಲಾಯಿತು. ಸುಮಾರು 300ಕ್ಕೂ ಹೆಚ್ಚು ಪ್ರೇಕ್ಷಕರಿಂದ ತುಂಬಿದ ಸಮಾರೋಪ ಸಭೆಯಲ್ಲಿ ಅತಿಥಿಗಳನ್ನು ಪರಿಷತ್ತಿನ ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವೇದಿಕೆಯಲ್ಲಿ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ ಎನ್ ಮತ್ತು ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಉಪಸ್ಥಿತರಿದ್ದರು . ರಾಧಿಕಾ ಚಂದ್ರಕಾಂತ್ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಪಾಂಗಣ್ಣಾಯರು ನಿರೂಪಿಸಿದರು. ಶ್ರೀಮತಿ ಉಷಾ ಹೆಬ್ಬಾರ್, ಸುಮನಾ ಆಚಾರ್ಯ ಮತ್ತು ದಿವ್ಯ ಪಾಡಿಗಾರು ಕಾರ್ಯಕ್ರಮವನ್ನು ಸುಂದರವಾಗಿ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply