ಪ್ಲಾಂಟ್ ಫಾರ್ ದಿ ನೇಷನ್ ವಿನೂತನ ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ : ರೆಪೆನ್ಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಎಸ್ ಡಿ ಪಿ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಬ್ರಹ್ಮಾವರ ಪೋಲಿಸ್ ಠಾಣೆ, ಇವರ ಸಂಯುಕ್ತ ಆಶ್ರಯದಲ್ಲಿ ಪ್ಲಾಂಟ್ ಫಾರ್ ಧಿ ನೇಷನ್ ವಿನೂತನ ಕಾರ್ಯಕ್ರಮ ಶುಕ್ರವಾರ ಬ್ರಹ್ಮಾವರ ಪೊಲೀಸ್ ಸ್ಟೇಶನ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು

ಉಡುಪಿ ಜಿಲ್ಲಾ ವಲಯ ಅರಣ್ಯ ಅಧಿಕಾರ ಸುಬ್ರಹ್ಮಣ್ಯ ಆಚಾರ್ಯ “ಅರಣ್ಯ ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯದ ಮಾತನಾಡುತ್ತಾ ಇದೊಂದು ಮಾದರಿ ಕಾರ್ಯಕ್ರಮ, ನಾಗರಿಕರು ಇದರ ಮಾಹಿತಿ ಪಡೆದು ಗಿಡ ನೆಟ್ಟು ಪ್ರಯೋಜನ ಪಡೆದುಕೊಳ್ಳಿ” ಎಂದು ತಿಳಿಸಿದರು. ಬ್ರಹ್ಮಾವರ ಪೊಲೀಸ್ ಸ್ಟೇಶನ್ ಉಪ ನಿರೀಕ್ಷಕರು ಆಗಿರುವ ಶ್ರೀ ಗುರುನಾಥ್ ಬಿ ಹಾದಿಮನಿ ತಮ್ಮ ಅನಿಸಿಕೆಯಲ್ಲಿ “ಕೋರೋನ ಖಾಯಿಲೆ ಬಂದ ಮೇಲೆ ಆಕ್ಸಿಜನ್ ಹಾಗೂ ಗಿಡ ಮರಗಳ ಪ್ರಾಮುಖ್ಯತೆ ಎಷ್ಟೆಂದು ಜನರಿಗೆ ಅರ್ಥವಾಗಿದೆ.ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಯಿಂದ ನಮ್ಮ ಆರೋಗ್ಯ ವೃದ್ಧಿಯಾಗುವುದು, ಆ ನಿಟ್ಟಿನಲ್ಲಿ ಇದೊಂದು ಉಪಯುಕ್ತ ಯೋಜನೆ” ಎಂದು ಶ್ಲಾಘನೀಯ ಮಾತನಾಡಿದರು.

ಸುಬ್ರಹ್ಮಣ್ಯ ಆಚಾರ್ಯ ಹಾಗೂ ಗುರುನಾಥ್ ಬಿ ಹಾದಿಮನಿ ಇಬ್ಬರು ರಕ್ತ ಚಂದನ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ದೂರ ದೃಷ್ಟಿಯ ಮನೋಭಿಲಾಷೆಯೊಂದಿಗೆ ಪ್ರಾರಂಭಿಸಿದ ಯೋಜನೆ “Plant for the Nation” ಪ್ರಾಯೋಗಿಕವಾಗಿ ಇಲ್ಲಿ ಪ್ರಾರಂಭಿಸಿ ಮುಂದೆ ಇದರ ಯಶಸ್ಸಿನ ಹೆಜ್ಜೆಯೊಂದಿಗೆ ದೇಶದಾದ್ಯಂತ ಯೋಜನೆಯನ್ನು ಅನುಷ್ಠಾನ ಗೊಳಿಸಿ ಪ್ರಕೃತಿ ಹಾಗೂ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಮುಂದುವರಿಯುವ ಯೋಚನೆ ಹಾಗೂ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯೊಂದಿಗೆ ನಮ್ಮ ರೆಪೆನ್ಸ್ ಮುಂದುವರಿಯುತ್ತಿದೆ” ಎಂದು ರೆಪೆನ್ಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥ ಹಾಗೂ ನಿರ್ದೇಶಕ ಪವನ್ ಶೆಟ್ಟಿ ಯವರೂ ಅಭಿಪ್ರಾಯ ತಿಳಿಸಿದರು.

ಇಂದು ನೆಡುವ ಒಂದು ರಕ್ತ ಚಂದನ ಗಿಡ 15 ವರ್ಷದ ನಂತರ ಅದರಿಂದ ಸಿಗುವಂತ ಆರ್ಥಿಕ ಮೊತ್ತದಿಂದ ಒಂದು ಹೆಣ್ಣು ಮಗುವಿನ ಭವಿಷ್ಯ ರೂಪಿಸಬಹುದು, ಮೇಲಾಗಿ ಪ್ರಕೃತಿ ಹಸನಾಗುವುದು, ನಾವೆಲ್ಲರೂ ಉತ್ತಮ ಗಾಳಿ ಮಳೆ ಯಿಂದ ಆರೋಗ್ಯಕರ ಜೀವನ ನಡೆಸಿ ಪ್ರಕೃತಿ ಮಾತೆಗೆ ಪಾವನವಾಗಬಹುದೆಂದು ಎಸ್.ಡಿ.ಪಿ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾಗಿರುವ ಎಸ್.ಬಿ ಶೆಟ್ಟಿ ಅಭಿಪ್ರಾಯ ಪಟ್ಟರು.

ಉಪಸ್ಥಿತರಿದ್ದ ಅತಿಥಿ ಗಣ್ಯರು ಹಾಗೂ ಸರ್ವರೂ ಸೇರಿ ಒಟ್ಟು 36 ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ನೆಡಲಾಯಿತು. ಈ ಗಿಡಗಳ ಸಂಪೂರ್ಣ ಭದ್ರತೆ, ರಕ್ಷಣೆ ಹಾಗೂ 2 ವರ್ಷದ ವರೆಗೆ ನಿರ್ವಹಣೆ ಈ ಯೋಜನೆಯ ಸಂಘಟಕರ ಜವಾಬ್ದಾರಿಯಾಗಿದ್ದು , ಪ್ರಾಯೋಗಿಕ ಯೋಜನೆ ಯಶಸ್ಸು ಗಳಿಸಿದರೆ ಮುಂದೆ ಬೇರೆ ಬೇರೆ ಕಡೆ ಮುಂದುವರಿಸುವ ಉದ್ದೇಶ ಕೂಡ ಇದೆ.

ಬ್ರಹ್ಮಾವರ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ ಧನಂಜಯ, ಹಾಗೂ ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಶ್ರೀ ಹರೀಶ್, ರಕ್ತ ಚಂದನ ಬೆಳೆಗಾರರು, ರೈತ ಪುಟ್ಟಯ್ಯ ಶೆಟ್ಟಿ, ಹಿರಿಯ ಕರುಣಾಕರ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಸ್ಟೇಶನ್ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.ರೆಪೆನ್ಸ್ ಹೆಲ್ತ್ ಕೇರ್ ನ ವಲಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ವಂದಿಸಿದರು.

 
 
 
 
 
 
 
 
 
 
 

Leave a Reply